Top

ಮೇ 17 ಪ್ರಮಾಣ ವಚನ ಸ್ವೀಕಾರ ಖಚಿತ: ಬಿಎಸ್​ವೈ

ಮೇ 17 ಪ್ರಮಾಣ ವಚನ ಸ್ವೀಕಾರ ಖಚಿತ: ಬಿಎಸ್​ವೈ
X

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಶೇ.70ಕ್ಕಿಂತ ಅಧಿಕ ಮತದಾನವಾಗಿದ್ದು, ಬಿಜೆಪಿ 120ರಿಂದ 135 ಸ್ಥಾನ ಗೆಲ್ಲುವ ಸಾಧ್ಯತೆ ಇದೆ. ಮೇ 17ರಂದು ಸಂಜೆ ನಾನು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದು ಖಚಿತ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ನಂತರ ಎಲ್ಲಾ ಕ್ಷೇತ್ರಗಳಲ್ಲಿ ಮತದಾನದ ಮಾಹಿತಿ ಸಂಗ್ರಹಿಸಿದ್ದೇನೆ. ಇನ್ನೆರಡು ದಿನಗಳು ಇದೇ ಕೆಲಸ ಮಾಡಲಿದ್ದೇನೆ. ಈಗಿನ ಮಾಹಿತಿ ಪ್ರಕಾರ ನಮಗೆ ಖಚಿತ ಬಹುಮತ ಲಭಿಸಲಿದೆ ಎಂದರು.

ಸಿದ್ದರಾಮಯ್ಯ ಅವರ ಕುರಿತು ಯಾವುದೇ ಹೇಳಿಕೆ ನೀಡುವುದಿಲ್ಲ. ಆದರೆ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ. ಈಗಾಗಲೇ ವರಿಷ್ಠರನ್ನು ಸಂಪರ್ಕಸಿದ್ದು, ಪ್ರಮಾಣ ವಚನ ಸ್ವೀಕಾರಕ್ಕೆ ಮಾತನಾಡಿದ್ಧೇನೆ ಎಂದು ಬಿಎಸ್​ವೈ ಹೇಳಿದರು.

Next Story

RELATED STORIES