Top

ಪ್ಲೇ ಆಫ್‍ಗೆ ಕೋಲ್ಕತ್ತಾ ನೈಟ್ ರೈಡರ್ಸ್

ಪ್ಲೇ ಆಫ್‍ಗೆ ಕೋಲ್ಕತ್ತಾ ನೈಟ್ ರೈಡರ್ಸ್
X

ಇಂದೋರ್:ಸುನೀಲ್ ನರೈನ್ ಅವರ ಆಲ್‍ರೌಂಡ್ ಆಟದ ಪ್ರದರ್ಶನ ನೆರವಿನಿಂದ ಕೋಲ್ಕತ್ತಾ ನೈಟ್‍ರೈಡರ್ಸ್ ತಂಡ ಪ್ಲೇ ಆಫ್ ಹಂತ ತಲುಪಿದೆ. ಇಲ್ಲಿನ ಹೋಲ್ಕರ್ ಕ್ರೀಡಾಂಗಣದಲ್ಲಿ ನಡೆದ ಚುಟಕು ಕದನದಲ್ಲಿ ಆತಿಥೇಯ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಟೂರ್ನಿಯಲ್ಲಿ ಸತತ ಎರಡನೇ ಸೋಲು ಅನುಭವಿಸಿತು.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ ನೈಟ್‍ರೈಡರ್ಸ್ ತಂಡಕ್ಕೆ ಆರಂಭಿಕ ಬ್ಯಾಟ್ಸ್‍ಮನ್ (75) ಅರ್ಧ ಶತಕದ ನೆರವಿನಿಂದ ತಂಡಕ್ಕೆ ಒಳ್ಳೆಯ ಆರಂಭ ನೀಡಿದ್ರು. ಕ್ರಿಸ್ ಲಿನ್ 27, ರಾಬಿನ್ ಉತ್ತಪ್ಪ 24, ಆಂಡ್ರೆ ರಸೆಲ್ 31, ನಾಯಕ ದಿನೇಶ್ ಕಾರ್ತಿಕ್ (50) 23 ಎಸೆತದಲ್ಲಿ 5 ಬೌಂಡಡಿ, 3 ಸಿಕ್ಸ್ ಬಾರಿಸಿ ಅರ್ಧ ಶತಕದ ಸಂಭ್ರಮ ಆಚರಿಸಿದ್ರು. ಕೋಲ್ಕತ್ತಾ ತಂಡ ನಿಗದಿತ ಓವರ್‍ನಲ್ಲಿ 6ವಿಕೆಟ್ ನಷ್ಟಕ್ಕೆ 245 ರನ್‍ಗಳಿಸಿತು.

ಬೃಹತ್ ಮೊತ್ತ ಬೆನ್ನತ್ತಿದ ಕ್ರಿಸ್ ಗೇಲ್(21) ಮತ್ತು ಕೆ.ಎಲ್. ರಾಹುಲ್ (66) ಒಳ್ಳೆಯ ಆರಂಭ ನೀಡಿದ್ರು. ನಂತರ ಬಂದ ಏರಾನ್ ಫಿಂಚ್ (34), ಆರ್.ಅಶ್ವಿನ್ (45) ಕೊನೆಗೆ ಪಂಜಾಬ್ ತಂಡ 20 ಓವರ್‍ನಲ್ಲಿ 8 ವಿಕೆಟ್ ನಷ್ಟಕ್ಕೆ 214 ರನ್ ಗಳಿಸುವಲ್ಲಿ ಮಾತ್ರ ಶಕ್ತವಾಗಿ 31 ರನ್‍ಗಳ ಸೋಲು ಅನುಭವಿಸಿತು.

Next Story

RELATED STORIES