Top

ಹಣ ಹಂಚುವಾಗ ಸಿಕ್ಕಿಬಿದ್ದ ಜೆಡಿಎಸ್ ಕಾರ್ಯಕರ್ತ

ಮತದಾರಿಗೆ ಹಣ ಹಂಚುವಾಗ ಜೆಡಿಎಸ್ ಕಾರ್ಯಕರ್ತ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ, ಬೆಂಗಳೂರಿನಲ್ಲಿ ನಡೆದಿದೆ. ಗಾಂಧಿನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ವಿ. ನಾರಾಯಣಸ್ವಾಮಿ ಪರ ಶ್ರೀರಾಮಪುರ ಪಾಲಿಕೆ ಮಾಜಿ ಸದಸ್ಯ ಮಲ್ಲೇಶ್ ದುಡ್ಡು ಹಂಚುತ್ತಿದ್ದ ಸಂದರ್ಭದಲ್ಲಿ ಸಿಕ್ಕಿಬಿದ್ದಿದ್ದು,ಕಾಂಗ್ರೆಸ್ ಕಾರ್ಯಕರ್ತರು ಮಲ್ಲೇಶ್ ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.ಜೆಡಿಎಸ್ ಪಕ್ಷದ ಚುನಾವಣೆ ಅವ್ಯವಹಾರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಶ್ರೀರಾಮಪುರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.ಸದ್ಯ ಆರೋಪಿ ಮಲ್ಲೇಶ್ ನನ್ನು ವಶಕ್ಕೆ ಪಡೆದಿರುವ ಶ್ರೀರಾಮಪುರ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.

Next Story

RELATED STORIES