Top

ಮೊದಲ ಬಾರಿ ಮತಚಲಾಯಿಸಿದ ಮಹಾರಾಜ

ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮೊದಲ ಬಾರಿ ಮತದಾನ ಮಾಡಿದ್ದಾರೆ. 30 ನಿಮಿಷ ಸರತಿ ಸಾಲಿನಲ್ಲಿ ನಿಂತು ಮತಚಲಾಯಿಸಿದ್ದಾರೆ. ಯದುವೀರ್, ಮೈಸೂರಿನ ಕೆ.ಆರ್.ಕ್ಷೇತ್ರದ ಮತದಾರರಾಗಿದ್ದು, ಶ್ರೀಕಾಂತ್ ಕಾಲೇಜಿನಲ್ಲಿರುವ ಮತಗಟ್ಟೆ 148ರಲ್ಲಿ ಮತದಾನ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಅವರು, ಕಳೆದ ಬಾರಿ ಚುನಾವಣೆಯಲ್ಲಿ ಅಮೆರಿಕದಲ್ಲಿದ್ದೆ.ಅದಕ್ಕೂ ಹಿಂದೆ ನಾನು ಮೈನರ್ ಆಗಿದ್ದೆ ಹಾಗಾಗಿ ಇದೇ ಮೊದಲ ಬಾರಿ ಮತದಾನ ಮಾಡಿದ್ದೇನೆ.ಪ್ರಜಾಪ್ರಭುತ್ವದ ಸಾಮನ್ಯ ಪ್ರಜೆಯಾಗಿ ಮತ ಚಲಾಯಿಸಿದ್ದೇನೆ. ಮತಗಟ್ಟೆಯ ಎಲ್ಲಾ ವ್ಯವಸ್ಥೆ ಚೆನ್ನಾಗಿತ್ತು ಎಂದಿದ್ದಾರೆ.

Next Story

RELATED STORIES