Top

ಮತದಾನ ಮಾಡಿದ ಚಿತ್ರರಂಗದ ಗಣ್ಯರು

ಮತದಾನ ಮಾಡಿದ ಚಿತ್ರರಂಗದ ಗಣ್ಯರು
X

ಬೆಂಗಳೂರು: ಬ್ಯೂಸಿ ಶೆಡ್ಯೂಲ್ ಹೊಂದಿರುವ ಚಿತ್ರರಂಗದ ಗಣ್ಯರು ಕೂಡ ಇಂದು ಬಿಡುವು ಮಾಡಿಕೊಂಡು ಓಟ್ ಹಾಕಿದ್ದಾರೆ.ಚುನಾವಣಾ ರಾಯಭಾರಿ ಪ್ರಣೀತಾ ಕೂಡ, ಕೆಂಪೇಗೌಡ ಕಾಲೇಜ್ ನಲ್ಲಿ ಮತದಾನ ಮಾಡಿದ್ದಾರೆ.

ನವರಸನಾಯಕ ಜಗ್ಗೇಶ್ ಕೂಡ ಕುಟುಂಬ ಸಮೇತರಾಗಿ ಬಂದು ಮತ ಚಲಾಯಿಸಿದ್ದಾರೆ.ಯಶವಂತಪುರ ಬಿಜೆಪಿ ಅಭ್ಯರ್ಥಿಯಾಗಿರುವ ಜಗ್ಗೇಶ್, ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಎಂ.ಇ.ಎಸ್.ಶಾಲೆಯಲ್ಲಿ ಮತದಾನ ಮಾಡಿದ್ದಾರೆ.ಈ ವೇಳೆ ಮಾತನಾಡಿದ ಜಗ್ಗೇಶ್, ಸಂವಿಧಾನದ ಆಶಯದಲ್ಲಿ ಮತದಾನ ಮಾಡುವುದು ಕಡ್ಡಾಯ, ಶ್ರೀ ಕೃಷ್ಣ ತನ್ನ ಬೆರಳಲ್ಲಿ ಪ್ರಪಂಚವನ್ನೇ ತಿರುಗಿಸಿದ ಬೆರಳಲ್ಲಿ ಮತ್ತೆ ಮತದಾನದ ಮೂಲಕ ಶಕ್ತಿ ಬಂದಂತಾಗಿದೆ. ಪ್ರತಯೊಬ್ಬರೂ ಮತದಾನ ಮಾಡಬೇಕು. ಯಾರು ತಮ್ಮ ಜವಾಬ್ದಾರಿಯನ್ನು ಮರೆಯಬಾರದು. ಸಾಕಷ್ಟು ಜನ ಹಣದ ಆಮಿಷಕ್ಕೆ ಮತಗಳನ್ನು ಮಾರಿಕೊಳ್ತಿದ್ದಾರೆ. ಇದು ಸರಿಯಲ್ಲ ಪ್ರಾಮಾಣಿಕ ಸಮಾಜಕ್ಕಾಗಿ ಯಾವುದೇ ಆಮಿಷಗಳಿಗೆ ಒಳಗಾಗಬಾರದು ಎಂದು ಹೇಳಿದ್ದಾರೆ.

ಇನ್ನು ರಾಜಾಜಿನಗರದಲ್ಲಿ ಕ್ರೆಜಿಸ್ಟಾರ್ ರವಿಚಂದ್ರನ್ ಮತದಾನ ಮಾಡಿದರು.ಪತ್ನಿ ಸಮೇತರಾಗಿ ಬಂದಿದ್ದ ರವಿಚಂದ್ರನ್, ರಾಜಾಜಿನಗರ ಠಾಗೂರ್ ಶಾಲೆಯಲ್ಲಿ ಮತದಾನ ಮಾಡಿದರು. ನಮ್ಮ ಹಣೆಬರಹ ಚೆನಾಗಿರ್ಬೇಕು ಅಂದ್ರೆ ಹಣೆಗೆ ಒತ್ತಬೇಕು, ಎಲ್ಲರೂ ಮತ ಹಾಕಿ ಅಂತ ಭಿಕ್ಷೆ ಬೇಡೋದಲ್ಲ, ಮತದಾನ ಪ್ರತಿಯೊಬ್ಬರ ಹಕ್ಕು, ಎಂದು ಹೇಳಿದ್ದಾರೆ.

ಡೈರೆಕ್ಟರ್ ತರುಣ್ ಸುಧೀರ್ ಕೂಡ ಮತಚಲಾಯಿಸಿದ್ದಾರೆ. ಮಗಳ ಜೊತೆಗೆ ಬಂದ ನಟ ರಮೇಶ್ ಅರವಿಂದ, ಮತದಾನ ಮಾಡಿದರು. ರಮೇಶ್ ಅರವಿಂದ್ ಪುತ್ರಿಗೆ ಇದು ಮೊದಲನೇ ಚುನಾವಣೆಯಾಗಿದ್ದು, ನಿಹಾರಿಕಾ ಮೊದಲ ಬಾರಿ ಓಟ್ ಮಾಡಿದರು.ಎಲ್ಲರೂ ಮತದಾನ ಮಾಡಬೇಕು. ಸ್ಕೂಲ್ ನಲ್ಲಿ ಇದ್ದಾಗ ಮತದಾನ ಮಾಡಬೇಕು ಅ್ನೋ ಆಸೆ ಇತ್ತು. ಇವತ್ತು ಮೊದಲ ಬಾರಿಗೆ ಮತದಾನ ಮಾಡಿದ್ದೇನೆ ತುಂಬಾ ಖುಷಿಯಾಗಿದೆ ಎಂದು ತಮ್ಮ ಸಂತಸವನ್ನು ಹಂಚಿಕೊಂಡ್ರು ನಿಹಾರಿಕಾ.

ಹಿರಿಯ ನಟಿ ಲೀಲಾವತಿ ಕೂಡ ಮತ ಚಲಾಯಿಸಿದರು. ಮಗ ವಿನೋದ್ ರಾಜ್ ಜೊತೆ ಲೀಲಾವತಿ ಓಟ್ ಹಾಕಲು ನೆಲಮಂಗಲ ತಾಲೂಕಿನ ಮೈಲನಹಳ್ಳಿಯಲ್ಲಿ ಮತದಾನಕ್ಕೆಂದು ಬಂದಾಗ, ಇವಿಎಂ ದೋಷವಾಗಿತ್ತು. ಈ ಕಾರಣಕ್ಕಾಗಿ ಒಂದು ಗಂಟೆಗಳ ಕಾಲ ಕಾದು ಕುಳಿತ ಹಿರಿಯ ನಟಿ, ದೋಷ ಸರಿಯಾದ ನಂತರ ಮತದಾನ ಮಾಡಿದರು.

ನಟಿ ಸುಧಾರಾಣಿ, ಮಗಳೊಂದಿಗೆ ಬಂದು ಗಾಂಧಿನಗರ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 11ರಲ್ಲಿ ಮತದಾನ ಮಾಡಿದರು.ನಟಿ ಮಾನ್ವಿತಾ ಹರೀಶ್ ಕೂಡ ತಮ್ಮ ಅಮ್ಮನೊಂದಿಗೆ ಬಂದು ಉತ್ತರಹಳ್ಳಿಯ ವಾರ್ಡ್ ನಂಬರ್ 33ಕ್ಕೆ ಬಂದು ಮತಚಲಾಯಿಸಿದರು.ರಿಯಲ್ ಸ್ಟಾರ್ ಉಪೇಂದ್ರ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸೇರಿ ಹಲವಾರು ಗಣ್ಯರು ಕುಟುಂಬದ ಜೊತೆ ಬಂದು ಓಟ್ ಹಾಕಿದರು.

---------------------------

Next Story

RELATED STORIES