ಬಟ್ಲರ್ಗೆ ಬಿದ್ದ ಚೆನ್ನೈ : ರಾಜಸ್ಥಾನ್ ಆಸೆ ಜೀವಂತ
TV5 Kannada12 May 2018 5:35 AM GMT
ಆರಂಭದಿಂದ ಕೊನೆಯವರೆಗೂ ಬಂಡೆಯಂತೆ ನಿಂತ ಜೋಸ್ ಬಟ್ಲರ್ ಅವರ ಸಾಹಸದಿಂದ ರಾಜಸ್ಥಾನ್ ರಾಯಲ್ಸ್ ತಂಡ 1 ಎಸೆತ ಬಾಕಿ ಇರುವಂತೆಯೇ 7 ವಿಕೆಟ್ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಬಗ್ಗುಬಡಿದ ರಾಜಸ್ಥಾನ್ ರಾಯಲ್ಸ್ ತಂಡ ಐಪಿಎಲ್ ಟಿ-20 ಟೂರ್ನಿಯಲ್ಲಿ ಪ್ಲೇಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿತು.
ಶುಕ್ರವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ ಗಳಲ್ಲಿ 4 ವಿಕೆಟ್ಗೆ 174 ರನ್ ಸಂಪಾದಿಸಿತು. ರಾಜಸ್ಥಾನ್ 19.5 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಆರಂಭಿಕ ಜೋಸ್ ಬಟ್ಲರ್ 60 ಎಸೆತಗಳಲ್ಲಿ 11 ಬೌಂಡರಿ ಹಾಗೂ 2 ಸಿಕ್ಸರ್ ಸೇರಿದ ಅಜೇಯ 95 ರನ್ ಬಾರಿಸಿ ತಂಡವನ್ನು ದಡ ಸೇರಿಸಿದರು. ರಾಜಸ್ಥಾನ್ 11 ಪಂದ್ಯಗಳಿಂದ 5 ಗೆಲುವಿನೊಂದಿಗೆ 6ನೇ ಸ್ಥಾನದಲ್ಲಿದೆ.
- ಸಂಕ್ಷಿಪ್ತ ಸ್ಕೋರ್
- ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ 4 ವಿಕೆಟ್ 174 (ರೈನಾ 52, ವ್ಯಾಟ್ಸನ್ 39, ಧೋನಿ ಅಜೇಯ 33, ಬಿಲ್ಲಿಂಗ್ಸ್ 27,
ಆರ್ಚರ್ 42/2).
- ರಾಜಸ್ಥಾನ್ ರಾಯಲ್ಸ್ 19.5 ಓವರ್ 6ವಿಕೆಟ್ 177 (ಬಟ್ಲರ್ ಅಜೇಯ 95, ಬಿನ್ನಿ 22, ಸ್ಯಾಮ್ಸನ್ 21, ಶಾರ್ದೂಲ್ 22/1).
Next Story