Top

8.64 ಲಕ್ಷ ಕರೆಂಟ್ ಬಿಲ್ ನೋಡಿ ತರಕಾರಿ ವ್ಯಾಪಾರಿ ಆತ್ಮಹತ್ಯೆ

8.64 ಲಕ್ಷ ರೂ. ಕರೆಂಟ್ ಬಿಲ್ ಬಂದಿದ್ದನ್ನು ನೋಡಿ ಆಘಾತಕ್ಕೊಳಗಾದ 40 ವರ್ಷದ ತರಕಾರಿ ವ್ಯಾಪಾರಿ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ಭರತ್​ ನಗರದಲ್ಲಿ ನಡೆದಿದೆ.

ಏಪ್ರಿಲ್ ತಿಂಗಳ ಬಿಲ್ ನೋಡಿ ಆಘಾತಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ವ್ಯಾಪಾರಿ ಜಗನ್ನಾಥನ್ ಶಿರ್ಕೆ ಪತ್ರ ಬರೆದಿದ್ದರು. ಇದನ್ನು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಹಾರಾಷ್ಟ್ರ ರಾಜ್ಯ ವಿದ್ಯುತ್​ ಪ್ರಸರಣ ನಿಗಮ ಅಚಾತುರ್ಯ ಮಾಡಿದ ಕ್ಲರ್ಕ್​ನನ್ನು ಸೇವೆಯಿಂದ ಅಮಾನತುಗೊಳಿಸಿದೆ.

20 ವರ್ಷಗಳಿಂದ ಜಗನ್ನಾಥನ್ ಶಿರ್ಕೆ ಮತ್ತು ಆತನ ಕುಟುಂಬ ಎರಡು ಕೊಠಡಿಯ ಶೆಡ್​ನಲ್ಲಿ ವಾಸ ಮಾಡುತ್ತಿದ್ದರು. ಆದರೆ ಏಪ್ರಿಲ್ ತಿಂಗಳ ಬಿಲ್​ 8,64,781 ರೂ. ಬಂದಿತ್ತು.

Next Story

RELATED STORIES