Top

ಹಿಂಸಾಚಾರದಿಂದ ಸ್ವಾತಂತ್ರ್ಯ ಸಿಗುವುದಿಲ್ಲ: ಬಿಪಿನ್ ರಾವತ್

ಯಾವ ಕೆಲಸ ನಿಮಗೆ ಸ್ವಾತಂತ್ರ್ಯ ಕೊಡಿಸುತ್ತದೆ ಎಂದು ನೀವು ತಿಳಿದುಕೊಂಡಿದ್ದೀರೋ, ಆ ಕೆಲಸ ನಿಮ್ಮ ದಾರಿ ತಪ್ಪಿಸುತ್ತಿದೆ. ಭಯೋತ್ಪಾದನೆಯಿಂದ ನಿಮಗೆಂದು ಸ್ವಾತಂತ್ರ್ಯ ಸಿಗುವುದಿಲ್ಲ.ನೀವು ಎಂದಿಗೂ ಭಾರತೀಯ ಸೇನೆಯೊಂದಿಗೆ ಸೆಣೆಸಲು ಸಾಧ್ಯವಿಲ್ಲವೆಂದು ಕಾಶ್ಮೀರಿ ಯುವಕರಿಗೆ ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಕರೆ ನೀಡಿದ್ದಾರೆ.

ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಬಿಪಿನ್ ರಾವತ್,ಶಸ್ತ್ರಾಸ್ತ್ರವನ್ನು ಕೈಗೆತ್ತಿಕೊಂಡು, ಭಾರತೀಯ ಸೇನೆಯೊಂದಿಗೆ ಸೆಣೆಸುವ ಪ್ರಯತ್ನ ಮಾಡಬೇಡಿ. ಹಿಂಸಾಚಾರ ನಡೆಸುವ ಉದ್ದೇಶ ಭಾರತೀಯ ಸೇನೆಗಿಲ್ಲ ಆದರೆ, ನಮ್ಮೊಂದಿಗೆ ನೀವು ಯುದ್ಧ ಮಾಡಲು ನುಗ್ಗುವಿರಾದರೆ ನಾವು, ನಮ್ಮ ಸೇನೆಯ ಜೊತೆ ನಿಮ್ಮೊಂದಿಗೆ ಯುದ್ಧ ಮಾಡಲು ಸಿದ್ಧರಿದ್ದೇವೆ ಎಂದು ಸವಾಲ್ ಹಾಕಿದ್ದಾರೆ.

ಅಲ್ಲದೇ, ಸಿರಿಯಾ ಹಾಗೂ ಪಾಕಿಸ್ತಾನ ಸೇನೆಗೆ ಹೋಲಿಸಿದರೆ, ಭಾರತೀಯ ಸೇನೆ ಅವರಷ್ಟು ಕ್ರೂರರಲ್ಲ. ಯುವ ಜನತೆಗೆ ಕೋಪ ಬರುವುದು ಸಹಜ, ಆದರೆ ಆ ಕೋಪವನ್ನು, ನಿಮ್ಮ ರಕ್ಷಣೆಗೆ ಇರುವ ಭಾರತೀಯ ಸೇನೆಯ ಮೇಲೆ ತೋರಿಸುವುದು ಸರಿಯಲ್ಲ. ಭಾರತೀಯ ಸೇನೆಯ ಮೇಲೆ ದಾಳಿ ನಡೆಸುವುದು, ಕಲ್ಲು ತೂರಾಟ ನಡೆಸುವುದು ಸರಿಯಲ್ಲವೆಂದು ಬಿಪಿನ್ ರಾವತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Next Story

RELATED STORIES