Top

ಶ್ರೀದೇವಿ ಅಸಹಜ ಸಾವು: ಮಧ್ಯಪ್ರವೇಶವಿಲ್ಲ ಎಂದ ಸುಪ್ರೀಂ

ಬಾಲಿವುಡ್​ ನಟಿ ಶ್ರೀದೇವಿ ಅಕಾಲಿಕ ಸಾವು ಪ್ರಕರಣದಲ್ಲಿ ನಾವು ಮಧ್ಯಪ್ರವೇಶಿಸುವುದಿಲ್ಲ ಅಂತಾ ಸುಪ್ರೀಂ ಕೋರ್ಟ್​ ಮುಖ್ಯ ನ್ಯಾಯಮೂರ್ತಿ ದೀಪಕ್​ ಮಿಶ್ರಾ ಅಭಿಪ್ರಾಯಪಟ್ಟಿದ್ದಾರೆ.

ಫೆಬ್ರುವರಿ 24ರಂದು ದುಬೈನ ಖಾಸಗಿ ಹೋಟೆಲ್​ ಒಂದರ ಬಾತ್​ಟಬ್​ನಲ್ಲಿ ಮುಳುಗಿ ನಟಿ ಶ್ರೀದೇವಿ ಮೃತಪಟ್ಟಿದ್ದರು. ಶ್ರೀದೇವಿ ಸಾವನ್ನ ಸಹಜಸಾವೆಂದು ದುಬೈ ಪೊಲೀಸರು ಹೇಳಿದ್ದರೂ ಕೂಡ ಶ್ರೀದೇವಿ ಬಳಿ ಇದ್ದ 246 ಕೋಟಿ ಇನ್ಶುರೆನ್ಸ್​ ಅವರ ಸಾವಿನ ಮೇಲೆ ಅನುಮಾನ ಮೂಡುವಂತೆ ಮಾಡಿತ್ತು. ಹೀಗಾಗಿ ಸುನಿಲ್​ ಸಿಂಗ್​ ಎಂಬುವವರು ದೆಲ್ಲಿ ಹೈಕೋರ್ಟ್ಗೆ ಸಾವಿನ ಮರುತನಿಖೆಗೆ ಅರ್ಜಿ ಸಲ್ಲಿಸಿದ್ರು.

ಹೈಕೋರ್ಟ್​ನಲ್ಲಿ ಅರ್ಜಿ ತಿರಸ್ಕೃತ ಹಿನ್ನೆಲೆ ಸುಪ್ರೀಂ ಮೊರೆ ಹೋಗಿದ್ದ ಸುನಿಲ್​ ಸಿಂಗ್​ಗೆ ಅಲ್ಲೂ ನಿರಾಸೆಯಾಗಿದೆ. ಕೇಸ್​ ಸಂಬಂಧ ಮರುತನಿಖೆ ನಿರಾಕರಿಸಿದ ಸುಪ್ರೀಂಕೋರ್ಟ್ ..ಈಗಾಗಲೇ ಶ್ರೀದೇವಿ ಸಾವಿನ ತನಿಖೆ ಸಂಬಂಧ ಎರಡು ಅರ್ಜಿ ತಿರಸ್ಕೃತ ಮಾಡಿದ್ದೇವೆ. ನಟಿ ಸಾವಿನ ಸಂಭಂಧ ನಾವು ಮಧ್ಯ ಪ್ರವೇಶಿಸಲ್ಲ ಅಂತಾ ಹೇಳಿದೆ.

Next Story

RELATED STORIES