Top

ರಾಜರಾಜೇಶ್ವರಿ ಚುನಾವಣೆ 28ಕ್ಕೆ ಮುಂದೂಡಿಕೆ

ಮತದಾರರ ಚೀಟಿ ಸಂಗ್ರಹ ಪತ್ತೆಯಾದ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗ ರಾಜರಾಜೇಶ್ವರಿ ವಿಧಾನಸಭಾ ಚುನಾವಣೆಯನ್ನು ಮೇ 28ಕ್ಕೆ ಮುಂಡೂಡಿದೆ.

ಚುನಾವಣಾ ವೀಕ್ಷಣಾ ದಳ ದಾಳಿ ನಡೆಸಿ ಮೇ 6ರಂದು ಮತದಾರರ ಚೀಟಿ ಸಂಗ್ರಹ ಹಾಗೂ 9 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿತ್ತು. ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಸೇರಿದಂತೆ 14 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಈ ಹಿನ್ನೆಲೆಯಲ್ಲಿ ರಾಜರಾಜೇಶ್ವರಿ ಕ್ಷೇತ್ರದ ಮತದಾನವನ್ನು 28ಕ್ಕೆ ಚುನಾವಣಾ ಮರು ನಿಗದಿಗೊಳಿಸಲಾಗಿದ್ದು, 31ಕ್ಕೆ ಫಲಿತಾಂಶ ಪ್ರಕಟಗೊಳ್ಳಲಿದೆ. ಚುನವಣಾಧಿಕಾರಿ ಸಂಜೀವ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದರು.

ಚುನಾವಣಾ ಅಕ್ರಮಗಳನ್ನು ಗಮನಿಸಿದ್ದು, ಎರಡೂ ಪಕ್ಷಗಳ ಮನವಿ ಮೇರೆಗೆ ಚುನಾವಣಾ ದಿನಾಂಕವನ್ನು ಮುಂದೂಡಲಾಗಿದೆ ಎಂದು ಸಂಜೀವ್ ಕುಮಾರ್ ತಿಳಿಸಿದರು.

Next Story

RELATED STORIES