Top

ಮಹಿಳೆಯರ ಪಿಂಕ್​ ಮತಗಟ್ಟೆಗೆ ವಿಶೇಷ ಕಳೆ

ಮಹಿಳೆಯರ ಪಿಂಕ್​ ಮತಗಟ್ಟೆಗೆ ವಿಶೇಷ ಕಳೆ
X

ಬೆಂಗಳೂರು ಸೇರಿದಂತೆ ನಾನಾ ಕಡೆ ಮಹಿಳೆಯರಿಗಾಗಿ ವಿಶೇಷವಾಗಿ ಪಿಂಕ್ ಮತಗಟ್ಟೆಗಳನ್ನು ನಿರ್ಮಿಸಲಾಗಿದ್ದು, ರಾಜಧಾನಿಯಲ್ಲಿನ ಪಿಂಕ್​ ಬೂತ್​ಗಳು ಮದವಣಿಗಿತ್ತಿಯಂತೆ ಶ್ರೀಂಗಾರಗೊಂಡು ಕಂಗೊಳಿಸುತ್ತಿವೆ.

ಪಿಂಕ್ ಬಲೂನ್ ಹಾಗೂ ಹೂವುಗಳಿಂದ ಸಿಂಗಾರ ಗೊಂಡಿರುವ ಮತಗಟ್ಟೆಗಳನ್ನು ಅಲಂಕರಿಸಲಾಗಿದೆ. ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಪಿಂಕ್ ಮತಗಟ್ಟೆಗಳ ಬಳಕೆ ಮಾಡಲಾಗುತ್ತಿದ್ದು, ಮಹಿಳಾ ಸ್ನೇಹಿ ಪಿಂಕ್ ಬೂತ್ ಇದಾಗಿದೆ.

ಮಹಿಳೆಯರ ಮತದಾನ ಪ್ರಮಾಣ ಹೆಚ್ಚಿಸಲು ಪಿಂಕ್ ಮತಗಟ್ಟೆಗಳಿಗೆ ಚಾಲನೆ ನೀಡಲಾಗಿದ್ಉದ, ಮಹಿಳೆಯರು ಬಂದು ಓಟ್ ಮಾಡುವ ಉದ್ದೇಶದಿಂದ ಪಿಂಕ್ ಮತಗಟ್ಟೆಗಳ ಬಳಕೆ ಮಾಡಲಾಗುತ್ತಿದೆ. ಬೆಂಗಳೂರಿನ ನಲ್ಲಿ ಒಟ್ಟು ೧೦೦ ಪಿಂಕ್ ಮತಗಟ್ಟೆಗಳಿದ್ದು, ಪ್ರತಿ ವಿಧಾನ ಸಭೆ ಕ್ಷೇತ್ರದಲ್ಲಿ ೩ ಕ್ಕಿಂತ ಹೆಚ್ಚು ಪಿಂಕ್ ಮತಗಟ್ಟೆಗಳನ್ನು ಆಯೋಜಿಸಲಾಗಿದೆ.

Next Story

RELATED STORIES