Top

ದೇವಿಗಾಗಿ ನಾಲಿಗೆ ಕತ್ತರಿಸಿಕೊಂಡ ಮಹಿಳೆ

ಮಧ್ಯಪ್ರದೇಶ: ಇಲ್ಲಿಯ ತರ್ಸಾಮಾ ಎಂಬ ಗ್ರಾಮದ ಮಹಿಳೆಯೊಬ್ಬಳು ದುರ್ಗಾದೇವಿಗಾಗಿ, ತನ್ನ ನಾಲಿಗೆಯನ್ನೇ ಕತ್ತರಿಸಿಕೊಂಡ ಘಟನೆ ನಡೆದಿದೆ. ಗುಡ್ಡಿ ತೋಮರ್ ಎಂಬ ಮಹಿಳೆ, ಗ್ರಾಮದ ಬಿಜಾಸೇನ್ ಮಾತಾ ದೇವಸ್ಥಾನದ ದೇವಿಗಾಗಿ,ತನ್ನ ನಾಲಿಗೆಯನ್ನ ಕತ್ತರಿಸಿ ಹರಕೆ ತೀರಿಸಿ,ಅನಾರೋಗ್ಯಕ್ಕೀಡಾಗಿದ್ದಾಳೆ. ಸದ್ಯ ಮಹಿಳೆಗೆ ಜ್ಞಾನ ತಪ್ಪಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಈಕೆ ದುರ್ಗಾದೇವಿಯ ಭಕ್ತೆಯಾಗಿದ್ದು, ವಿವಾಹವಾದ ದಿನದಿಂದ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ, ಬಿಜೆಸೇನ್ ದೇವಿ ದೇವಸ್ಥಾನಕ್ಕೆ ಹೋಗುತ್ತಿದ್ದಳು. ಆದ್ರೆ ನಿನ್ನೆ ಇದ್ದಕ್ಕಿದ್ದ ಹಾಗೆ ದೇವಸ್ಥಾನಕ್ಕೆ ಹೋದಾಗ, ತನ್ನ ನಾಲಿಗೆಯನ್ನು ಕತ್ತರಿಸಿಕೊಂಡಿದ್ದಾಳೆ ಎಂದು ಗುಡ್ಡಿ ತೋಮರ್ ಪತಿ ರವಿ ತೋಮರ್ ಹೇಳಿದ್ದಾನೆ. ಆದರೆ ದೇಶ ಅಭಿವೃದ್ಧಿಯತ್ತ ಸಾಗುತ್ತಿದ್ದರೂ, ಜನ ಮೂಢನಂಬಿಕೆಯಲ್ಲಿರುವುದು ಮಾತ್ರ ವಿಪರ್ಯಾಸದ ಸಂಗತಿ.

Next Story

RELATED STORIES