Top

ಥಿಯೇಟರ್​ನಲ್ಲಿ ದಾರಿ ತಪ್ಪಿದ ಮಗ

1975, ಆಗಸ್ಟ್ 23ರಂದು ತೆರೆಕಂಡು ಸತತ 25 ವಾರಗಳ ಕಾಲ ಯಶಸ್ವೀ ಪ್ರದರ್ಶನ ಕಂಡ ಕನ್ನಡದ ಬ್ಲಾಕ್ ಬಸ್ಟರ್ ಸಿನಿಮಾ ದಾರಿ ತಪ್ಪಿದ ಮಗ ರೀ-ರಿಲೀಸ್ ಆಗಿದೆ. ಡಾ ರಾಜ್​ಕುಮಾರ್ ದ್ವಿಪಾತ್ರದಲ್ಲಿ ಅಭಿನಯಿಸಿದ್ದ ಈ ಸಿನಿಮಾದಲ್ಲಿ ಕಲ್ಪನಾ, ಆರತಿ, ಮಂಜುಳಾ, ಜಯಮಾಲಾ, ಕೆಎಸ್ ಅಶ್ವತ್ಥ್, ವಜ್ರಮುನಿ, ತೂಗುದೀಪ ಶ್ರೀನಿವಾಸ್ ಹೀಗೆ ಸಾಕಷ್ಟು ಮಂದಿ ದಿಗ್ಗಜ ಕಲಾವಿದರು ಬಣ್ಣ ಹಚ್ಚಿದ್ದರು. ಪೇಕೇಟಿ ಶಿವರಾಂ ನಿರ್ದೇಶಿಸಿ, ನಿರ್ಮಿಸಿದ್ದ ದಾರಿ ತಪ್ಪಿದ ಮಗ ಚಿತ್ರಕ್ಕೆ ಜಿಕೆ ವೆಂಕಟೇಶ್ ಸಂಗೀತ ಸಂಯೋಜಿಸಿದ್ದರು. ಚಿ ಉದಯ್ ಶಂಕರ್ ಸಾಹಿತ್ಯ, ಎಸ್ ಪಿ ಬಾಲಸುಬ್ರಮಣ್ಯಂ, ಜಾನಕಿ ಗಾಯಕನದ ಹಾಡುಗಳು ಇಂದಿಗೂ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ. ಅಂತಹ ಸೂಪರ್ ಹಿಟ್ ಸಿನಿಮಾ ಇದೀಗ ಕೆಜಿ ರಸ್ತೆಯ ತ್ರಿವೇಣಿ ಚಿತ್ರಮಂದಿರದಲ್ಲಿ ರೀ-ರಿಲೀಸ್ ಆಗಿದೆ. ಎಲೆಕ್ಷನ್ ಜಂಜಾಟದಲ್ಲಿ ಮಂಡೆ ಬಿಸಿ ಆಗಿರೋರಿಗೆ ಅಣ್ಣಾವ್ರ ಸಿನಿಮಾ ಒಳ್ಳೆ ಕಿಕ್ ಕೊಡಲಿದೆ.

Next Story

RELATED STORIES