Top

ಚುನಾವಣೆ ತಯಾರಿ ಬಗ್ಗೆ ಮಾಹಿತಿ ನೀಡಿದ ಡಿಜಿ ನೀಲಮಣಿ ರಾಜು

ನಾಳೆ ವಿಧಾನಸಭೆ ಚುನಾವಣೆ ಹಿನ್ನೆಲೆ, ಡಿಜಿ ನೀಲಮಣಿ ರಾಜು ಸುದ್ದಿಗೋಷ್ಠಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಈ ಹಿಂದೆ ದೆಹಲಿ ಚುನಾವಣಾಧಿಕಾರಿಗಳ ಬಳಿ ಮೀಟಿಂಗ್ ಮಾಡಿದ್ದೇವೆ. ಪೊಲೀಸ್ ಚಾಲೆಂಜ್ ಅಂದ್ರೆ ಕಮ್ಯೂನಲ್ ಕ್ಲಾಷ್ ಆಗಬಾರದು, ಗಲಾಟೆ ಆಗಬಾರದು.ಎಲೆಕ್ಷನ್ ನೋಡಲ್ ಆಫಿಸರ್ ಆಗಿ ಕಮಲ್ ಪಂಥ್ ಅವರನ್ನ ನೇಮಕ‌ ಮಾಡಲಾಗಿದೆ. ನಗರದ ಲಾ ಆಂಡ್ ಆರ್ಡರ್ ಪ್ರತಿದಿನ ಒಂದು ರಿಪೋರ್ಟ್ ದೆಹಲಿಗೆ ಕೊಡುತ್ತೇವೆ.97 ಸಾವಿರ ಲೈಸನ್ಸ್ ವೆಪನ್ ಗಳನ್ನ ಈಗಾಗಲೇ ಸೀಝ್ ಮಾಡಿದ್ದೇವೆ.ಎಲ್ಲಾ ಚೆಕ್ ಪೋಸ್ಟ್ ಗಳಲ್ಲಿ ಕೂಲಂಕುಷವಾಗಿ ಪರಿಶೀಲನೆ ನಡೆಸಿದ್ದೇವೆ. ಇದಕ್ಕೆಂದೆ ಸಾಕಷ್ಟು ಸಿಬ್ಬಂದಿ ಗಳನ್ನ ನಿಯೋಜನೆ ಮಾಡಿದ್ದೇವೆ ಎಂದಿದ್ದಾರೆ. ಅಲ್ಲದೇ 47 ಸಾವಿರ ಬಿ ಎಸ್ ಎಫ್ ಫೋರ್ಸ್,ಸೀಮಾ ಸುರಕ್ಷಾ ಕೇಂದ್ರ ಮೀಸಲು ಪಡೆ ಹೊರ ರಾಜ್ಯದಿಂದ 585 ಕಂಪನಿಗಳ ಸಿಬ್ಬಂದಿಗಳನ್ನ ನಿಯೋಜನೆ ಮಾಡಿದ್ದೇವೆ.ಇವಿಎಂ ಸ್ಟೋರ್ ಮಾಡುವಾಗ ವೋಟಿಂಗ್ ಸಮಯದಲ್ಲಿ ಸೆಂಟ್ರಲ್ ರಿಸರ್ವ್ ಫೋರ್ಸ್ ನ್ನು ನಿಯೋಜನೆ ಮಾಡಿದ್ದೇವೆ.ಗಲಾಟೆ ಆಗಬಾರದೆಂದು ಸಾಕಷ್ಟು ಜನ ಸಿಬ್ಬಂದಿಯನ್ನ ನಿಯೋಜನೆ ಮಾಡಿದ್ದೇವೆ. ಡಿಸಿಪಿ , ಫಾರೆಷ್ಟ್ ಡಿಫೆನ್ಸ್ , ಹೋಂಗಾರ್ಡ್ ಎಲ್ಲ ಸೇರಿ 82157 ಜನ ಸಿಬ್ಬಂದಿಯನ್ನ ನೇಮಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Next Story

RELATED STORIES