Top

ಚುನಾವಣಾ ಕರ್ತವ್ಯದಿಂದ ವಿನಾಯಿತಿ ಕೋರಿ ಕಾಲಿಗೆ ಬಿದ್ದ ವಯೋವೃದ್ಧ

ಅನಾರೋಗ್ಯ ಕಾರಣ ನಡೆಯಲು ಆಗದ ಸ್ಥಿತಿಯಲ್ಲಿದ್ದು ಚುನಾವಣಾ ಕರ್ತವ್ಯದಿಂದ ವಿನಾಯಿತಿ ನೀಡುವಂತೆ ಕೋರಿ ವೃದ್ಧರೊಬ್ಬರು ಅಧಿಕಾರಿಗಳಿಗೆ ಕಾಲಿಗೆ ಬಿದ್ದ ಮನಕಲಕುವ ವೀಡಿಯೊ ದೃಶ್ಯಗಳು ವೈರಲ್ ಆಗಿದೆ.

ಮೈಸೂರಿ‌ನ ಎಚ್.ಡಿ.ಕೋಟೆಯಲ್ಲೊಂದು ಮನ ಮಿಡಿಯುವ ಘಟನೆ ನಡೆದಿದೆ. ನಡೆಯಲು ಆಗದ ವಯೋವೃದ್ದರನ್ನ ಚುನಾವಣೆ ಕೆಲಸಕ್ಕೆ ನೇಮಕವಾದ ಹಿನ್ನಲೆಯಲ್ಲಿ ಕಾವೇರಿ ನಿಗಮದಲ್ಲಿ ಡಿ.ಗ್ರೂಪ್ ನೌಕರರಾಗಿರುವ ಜಯತೀರ್ಥ ರಸ್ತೆ ಬದಿ ಕುಳಿತು ಬೂತ್ ಬಳಿ ಕರೆದುಕೊಂಡು ಹೋಗುವಂತೆ ಮನವಿ ಮಾಡಿದರು.

ಸ್ಥಳೀಯ ದಾರಿಹೋಕರಿಗೆ ಮನವಿ ಮಾಡುತ್ತಿದ್ದ ಜಯತೀರ್ಥ, ಅದೇ ವೇಳೆಯಲ್ಲಿ ಬಂದ ಚುನಾವಣಾಧಿಕಾರಿ ಮುಂದೆ ಬಂದ ಮನವಿ ಮಾಡಿದರು. ಈ ವೇಳೆ ಅಧಿಕಾರಿಗಳು ಸ್ಪಂದಿಸದೇ ಇದ್ದಾಗ ತಮಗಿಂತ ಕಿರಿಯ ವ್ಯಕ್ತಿಯಾದರೂ ಅಧಿಕಾರಿಗೆ ಕಾಲಿಗೆ ಬಿದ್ದು ಮನವಿ ಮಾಡಿದರು.

ಕೂಡಲೇ ಹಿರಿಯ ಅಧಿಕಾರಿ ಹಾಗೂ ತಹಸೀಲ್ದಾರ್ ಗಮನಕ್ಕೆ ವಿಷಯ ತರಲಾಗಿದ್ದು, ವಯೋ ವೃದ್ದ ಜಯತೀರ್ಥ ಮಾತಿಗೆ ಸ್ಪಂದಿಸಿದ ಅಧಿಕಾರಿಗಳು. ಸ್ಥಳದಲ್ಲೇ ಜಯತೀರ್ಥರ‌ನ್ನ ವಿಮುಕ್ತಿ ಗೊಳಿಸಿ ಆದೇಶ ನೀಡಿದರು.

Next Story

RELATED STORIES