Top

ಚಿಕ್ಕಮಕ್ಕಳಿಗೆ ಚಾಕೋಲೇಟ್ ಕೊಟ್ಟಿದ್ದಕ್ಕೆ ಭೀಕರ ಹತ್ಯೆ

ಚಿಕ್ಕಮಕ್ಕಳಿಗೆ ಚಾಕೋಲೇಟ್ ನೀಡಿದ್ದಕ್ಕೆ 65 ವರ್ಷದ ಮಹಿಳೆಯನ್ನು ಥಳಿಸಿ ಕೊಂದಿರುವ ಘಟನೆ, ತಮಿಳುನಾಡಿನಲ್ಲಿ ನಡೆದಿದೆ. ಇಲ್ಲಿನ ತಿರುವನಮಲೈನಲ್ಲಿ ಈ ಘಟನೆ ನಡೆದಿದ್ದು, ರುಕ್ಮಿಣಿ ಎಂಬ ಮಹಿಳೆ ತನ್ನ ಸಂಬಂಧಿಕರು ಮತ್ತು ಕಾರ್ ಚಾಲಕನ ಜೊತೆಗೆ, ಇಲ್ಲಿನ ದೇವಸ್ಥಾನವೊಂದಕ್ಕೆ ಭೇಟಿ ನೀಡಿದ್ದರು. ಈ ವೇಳೆ ಗ್ರಾಮದ ಮಕ್ಕಳಿಗೆ ರುಕ್ಮಿಣಿ ಚಾಕೋಲೇಟ್ ನೀಡಿದ್ದಾರೆ.ಈ ಬಗ್ಗೆ ಒಬ್ಬರಿಗೊಬ್ಬರು ಮಾಹಿತಿ ರವಾನಿಸಿಕೊಂಡ ಗ್ರಾಮಸ್ಥರು ರುಕ್ಮಿಣಿ ಮತ್ತು ಅವರೊಟ್ಟಿಗೆ ಇದ್ದವರು ಮಕ್ಕಳ ಕಳ್ಳರೆಂದು ತಪ್ಪಾಗಿ ತಿಳಿದು,ಅವರನ್ನು ಸುತ್ತುವರೆದು,ಕಟ್ಟಿಗೆಯಿಂದ ಎಲ್ಲರನ್ನು ಹಿಡಿದು ಥಳಿಸಿದ್ದಾರೆ. ಥಳಿತಕ್ಕೊಳಗಾದ ರುಕ್ಮಿಣಿ ಸಾವನ್ನಪ್ಪಿದ್ದು, ಇವರೊಂದಿಗಿದ್ದ ಸಂಬಂಧಿಕರು ಮತ್ತು ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು. ಚಿಕಿತ್ಸೆ ನೀಡಲಾಗಿದೆ. ಈ ಪ್ರಕರಣವನ್ನು ಕೈಗೆತ್ತಿಕೊಂಡಿರುವ ಸ್ಥಳೀಯ ಪೊಲೀಸರು,23 ಜನ ಗ್ರಾಮಸ್ಥರನ್ನು ಬಂಧಿಸಿದ್ದು, ತನಿಖೆ ಮುಂದುವರೆಸಿದ್ದಾರೆ.

Next Story

RELATED STORIES