Top

ಆರ್ಕೆಸ್ಟ್ರಾಗಾಗಿ 11 ಹಾಡು ಬರೆದ ‘ಡಾಲಿ’

ಆರ್ಕೆಸ್ಟ್ರಾಗಾಗಿ 11 ಹಾಡು ಬರೆದ ‘ಡಾಲಿ’
X

ಟಗರು ಚಿತ್ರದಲ್ಲಿ ಡಿಫ್ರೆಂಟ್ ಸ್ಟೈಲು ಮತ್ತು ಮ್ಯಾನರಿಸಂನಿಂದ ಸ್ಯಾಂಡಲ್​ವುಡ್ ಅಂಗಳದಲ್ಲಿ ಸೆನ್ಸೇಷನ್ ಹುಟ್ಟಿಸಿದ್ದ ಪಾತ್ರ ಡಾಲಿ. ಸ್ಪೆಷಲ್ ಸ್ಟಾರ್ ಧನಂಜಯರನ್ನ ಡಾಲಿ ಧನಂಜಯ ಅಂತ ಬದಲಿಸಿದ ಟಗರು, ನಾಯಕ ಖಳನಾಯಕನಾಗಿಯೂ ಮಿಂಚಬಹುದು ಅನ್ನೋದನ್ನ ಮನದಟ್ಟು ಮಾಡಿತ್ತು.

ಇದೀಗ ಆ ಟಗರು ಸಿನಿಮಾ ಶತದಿನೋತ್ಸವ ಕಾಣೋಕ್ಕೂ ಮೊದಲೇ ಧನಂಜಯ ಮತ್ತೊಂದು ದಾಖಲೆ ಬರೆದಿದ್ದಾರೆ. ಸಿನಿಮಾವೊಂದಕ್ಕೆ ಬರೋಬ್ಬರಿ 11 ಹಾಡುಗಳಿಗೆ ಸಾಹಿತ್ಯ ಬರೆಯೋ ಮೂಲಕ ವಿಲನ್​ನಲ್ಲೊಬ್ಬ ಅದ್ಭುತ ಸಾಹಿತಿ ಇದ್ದಾನೆ ಅನ್ನೋದನ್ನ ಪ್ರೂವ್ ಮಾಡಿದ್ದಾರೆ. ಯೆಸ್, ಧನಂಜಯ ತನ್ನ ಗೆಳೆಯ ಸುನಿಲ್ ನಿರ್ದೇಶನ ಮ್ಯೂಸಿಕಲ್ ಲವ್ ಸ್ಟೋರಿ ಆರ್ಕೆಸ್ಟ್ರಾ ಸಿನಿಮಾಗಾಗಿ ಈ ಸಾಹಸ ಮಾಡಿದ್ದಾರಂತೆ.

ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಸಂಯೋಜನೆಯ ಆಲ್ಬಮ್ ಇದಾಗಿದ್ದು, ಧನಂಜಯ ಪದಪುಂಜಕ್ಕೆ ಗುರುಕಿರಣ್ ಅಕ್ಷರಶಃ ಬೆರಗಾಗಿದ್ದಾರಂತೆ. ರಂಗಭೂಮಿಯಿಂದ ಬಂದಂತಹ ಧನಂಜಯ, ಬಹುಮುಖ ಪ್ರತಿಭೆಯಾಗಿದ್ದು, ಪಾತ್ರಗಳ ಆಯ್ಕೆಯಲ್ಲೂ ಸಖತ್ ಜಾಗರೂಕರಾಗಿದ್ದಾರೆ. ಕಮರ್ಷಿಯಲ್ ಸಿನಿಮಾಗಳ ಜೊತೆಗೆ ಕಲಾತ್ಮಕ ಸಿನಿಮಾಗಳಲ್ಲೂ ನಟಿಸೋ ಮೂಲಕ ಭೇಷ್ ಅನಿಸಿಕೊಂಡಿದ್ದಾರೆ.

ಅದೇನೇ ಇರಲಿ, ನಿರ್ದೇಶನದ ಕನಸನ್ನೂ ಹೊತ್ತಿರೋ ಅಂತಹ ಧನಂಜಯ, ಈಗ ಸಾಹಿತ್ಯ ಒದಗಿಸಿರೋದೇ ಸದ್ಯದ ಟಾಕ್. ಸಿನಿಮಾಗಾಗಿ ಹಗಲಿರುಳು ದುಡಿಯೋ ಅಂತಹ ಸಿನಿಮೋತ್ಸಾಹಿ ಯುವ ಪ್ರತಿಭೆ ಧನಂಜಯ ಸದ್ಯ ಜಯದ ಬೆನ್ನತ್ತಿರೋದು ವಿಶೇಷ.

Next Story

RELATED STORIES