Top

ಅಶೋಕ್ ಖೇಣಿ ಮನೆ ಮೇಲೆ ಐಟಿ ರೇಡ್

ಚುನಾವಣೆಗೆ ಇನ್ನೇನು ಕ್ಷಣಗಣನೆ ಆರಂಭವಾದ ಬೆನ್ನಲ್ಲೇ ಇಂದು ಐಟಿ ಅಧಿಕಾರಿಗಳು ಅಶೋಕ್ ಖೇಣಿ‌ ಮನೆ‌ಮೇಲೆ ದಾಳಿ‌ ನಡೆಸಿ ಬಂದ ದಾರಿಗೆ ಸುಂಕವಿಲ್ಲ ಎಂದು ಬರಿಗೈಯಲ್ಲಿ ವಾಪಸ್ ಆಗಿದ್ದಾರೆ.. ಹೌದು ಬೀದರ್ ನ ಬ್ಯಾಂಕ್ ಕಾಲೋನಿಯಲ್ಲಿರುವ ಬೀದರ್ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಖೇಣಿ‌ ಮನೆ ಮೆಲೆ ಐಟಿ ಅಧಿಕಾರಿಗಳು ಹಾಗೂ ಚುನಾವಣಾ ಅಧಿಕಾರಿಗಳು ದಾಳಿ ನಡೆಸಿ ಸತತ ಒಂದು ಗಂಟೆ ಕಾಲ ಪರಿಶೀಲನೆ ನಡೆಸಿದ್ದಾರೆ.. ಆದರೆ ಮನೆಯಲ್ಲಿ ಯಾವುದೇ ನಗ ನಾಣ್ಯ ಹಾಗೂ ಅಕ್ರಮದ ದಾಖಲೆ ಪತ್ರಗಳು ಸಿಗದೆ ಅಧಿಕಾರಿಗಳು ನಿರಾಸೆಗೊಂಡು ವಾಪಾಸ್ ಆಗಿದ್ದಾರೆ.

ನಿನ್ನೆ ತಡ ರಾತ್ರಿ ನಗರದ ಸಪ್ನ ಹೋಟಲ್ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಸುಮಾರು ೮೫ ಸಾವಿರ ನಗದು ಹಾಗೂ ನಾಲ್ಕು ಲಿಕ್ಕರ್ ಬಾಟಲಿಗಳನ್ನ ವಶಕ್ಕೆ ಪಡೆಸಿಕೊಂಡು ಒರ್ವನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ವೇಳೆ ಇದೆಲ್ಲ ಸ್ಥಳೀಯ ಶಾಸಕರೊಬ್ಬರಿಗೆ ಸೇರಿದ್ದು ಎಂದು ಆರೋಪಿ ಒಪ್ಪಿಕೊಂಡ ಹಿನ್ನಲೆ ಇಂದು ಅಶೋಕ್ ಮನೆ ಅಬಕಾರಿ ಅಧಿಕಾರಿಗಳು, ಚುನಾವಣಾ ಅಧಿಕಾರಿಗಳು ಹಾಗೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಯಾವುದೆ ಹಣ ಸಿಗದೆ ಬರೀ ಪಕ್ಷದ ಪಾಂಪ್ಲೇಟ್ ಗಳನ್ನು ವಶಕ್ಕೆ ಪಡೆದು ಬರಿಗೈಯಲ್ಲಿ ವಾಪಾಸ್ ಆಗಿದ್ದಾರೆ.

ಇನ್ನು ಬಳಿಕ ಮಾತನಾಡಿದ ಅಶೋಕ್ ಖೇಣಿ,ಇದೊಂದು ರಾಜಕೀಯ ಉದ್ದೇಶವಾಗಿದ್ದು, ಸೋಲುತ್ತೇವೆ ಎನ್ನುವ ಭಯದಿಂದ ಜೆಡಿಎಸ್ ಬಿಜೆಪಿ ಸೇರಿ ಸುಳ್ಳು ದೂರು ದಾಖಲಿಸಿವೆ. ಹೀಗಾಗಿ ಇಂದು ದಾಳಿ‌ನಡೆಸಿದ್ದಾರೆ ಎಂದು ಅಶೋಕ್ ಖೇಣಿ ಪ್ರತಿಕ್ರಿಯೆ ನೀಡಿದ್ದಾರೆ.ಅವರ ಕೆಲಸ ಅವರು ಮಾಡುತ್ತಿದ್ದಾರೆ ಯಾರಿಗೂ ಒಳಗೆ ಬಿಡುತ್ತಿಲ್ಲಾ, ನಾನು ಬೆರೆಯವರ ತರಹ ಕತ್ತೆ ಕೆಲಸ ಮಾಡೊಲ್ಲಾ. ಜನರಿಗೆ ಹೆದರಿಸೋದು ಅವರ ಕೆಲಸ. ನಾನು ಹಾಗೆ ಮಾಡಲ್ಲಾ ಯಾರಿಗೂ ಹೆದರೊಲ್ಲಾ, ಚುನಾವಣೆಯಲ್ಲಿ ನಾನು ಗೆದ್ದೆ ಗೆಲ್ಲುತ್ತೇನೆ ಎಲ್ಲಾರಿಗೂ ಕರೆದು ವಿಜಯೋತ್ಸವ ಮಾಡುತ್ತೇನೆ ಎಂದು ಹೇಳಿದರು.

ಇನ್ನು ಅಶೋಕ್ ಖೇಣಿ ಆದಾಯ ಕಟ್ಟಿಲ್ಲಾ ಹೀಗಾಗಿ ದಾಳಿ ನಡೆಸಿದ್ದಾರೆ ಎಂದು ಟಿವಿ5 ಪ್ರಶ್ನೆ ಮಾಡಿದ್ದಕ್ಕೆ ಗರಂ ಆಗಿ ಉತ್ತರಿಸಿದ ಖೇಣಿ ಆರೋಪ ಯಾರು ನೀವು ಮಾಡುತ್ತಿದ್ದೀರಾ ಎಂದು ಟಿವಿ5 ವಿರುದ್ದ ಗರಂ ಆದ್ರು..ಆರೋಪ ಮಾಡಿ ನೀವು ಟ್ಯಾಕ್ಸ್ ಕಟ್ಟಿಲ್ಲ ನಿಮ್ಮ ಮೇಲೂ ರೆಡ್ ಆಗುತ್ತೆ ,ನಾನು ಟ್ಯಾಕ್ಸ್ ಕಟ್ಟಿಲ್ಲಾ ಅಂದ್ರೆ ಚುನಾವಣೆಗೆ ನಿಲ್ಲೂಕೆ ಆಗಲ್ಲಾ ಎಲ್ಲವೂ ಡಿಕ್ಲೆಯರ್ ಮಾಡಬೇಕಾಗುತ್ತೆ ಎಂದು ಖಾರವಾಗಿ ನುಡಿದ್ರು.

Next Story

RELATED STORIES