Top

ಹೊಸ ಸಿನಿಮಾ ಶುರು ಮಾಡ್ತಿದ್ದಾರೆ ಉಪ್ಪಿ

ಹೊಸ ಸಿನಿಮಾ ಶುರು ಮಾಡ್ತಿದ್ದಾರೆ ಉಪ್ಪಿ
X

ಉಪ್ಪಿ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಅದೇನಂದ್ರೆ, ಉಪೇಂದ್ರ ಮತ್ತೆ ಬಣ್ಣ ಹಚ್ಚಲಿದ್ದಾರೆ. ಪ್ರಜಾಕೀಯದ ಕಡೆ ಮುಖ ಮಾಡಿದ್ದ ಉಪ್ಪಿ ಸಿನಿಮಾಗಳಲ್ಲಿ ನಟಿಸಲ್ಲ ಎನ್ನಲಾಗುತ್ತಿತ್ತು. ಉಪ್ಪಿ ಕೆಪಿಜೆಪಿ ಪಕ್ಷದ ಮೂಲಕ ಚುನಾವಣೆ ಎದುರಿಸಲು ಮುಂದಾಗಿದ್ದರು. ಆದರೆ ಕೆಪಿಜೆಪಿ ಪಕ್ಷದ ಸಂಸ್ಥಾಪಕ ಮಹೇಶ್ ಗೌಡ ಜೊತೆಗಿನ ಭಿನ್ನಾಭಿಪ್ರಾಯದಿಂದ ಉಪ್ಪಿ ಪಕ್ಷದಿಂದ ಹೊರ ಬಂದಿದ್ದರು. ಇತ್ತೀಚೆಗೆ ಉತ್ತಮ ಪ್ರಜಾಕೀಯ ಅನ್ನೋ ಪಕ್ಷದ ಹೆಸರನ್ನು ನೋಂದಣಿ ಮಾಡಿಸಿದ್ದರು. ಆದರೆ ಮತ್ತೆ ರಿಯಲ್ ಸ್ಟಾರ್ ಚಿತ್ರರಂಗದತ್ತ ಮುಖಮಾಡಿದ್ದು, ಆರ್.ಚಂದ್ರುರೊಂದಿಗೆ ಸೇರಿ ಹೊಸ ಸಿನಿಮಾ ಮಾಡಲಿದ್ದಾರೆ. ಟೈಟಲ್ ಪೋಸ್ಟರ್ ಈಗಾಗಲೇ ಬಿಡುಗಡೆಯಾಗಿದ್ದು, ಐಲವ್ ಯೂ ಅನ್ನೋದು ಸಿನಿಮಾ ಟೈಟಲ್ ಆಗಿದೆ.

Next Story

RELATED STORIES