ಹಾಸನದಲ್ಲಿ ಚುನಾವಣಾಧಿಕಾರಿಗಳ ದಾಳಿ : 200 ಬಾಕ್ಸ್ ಮದ್ಯ ವಶ
ಹಾಸನ : ಬಹಿರಂಗ ಪ್ರಚಾರಕ್ಕೆ ಇಂದು ತೆರೆ ಬಿದ್ದಿದೆ. ಕೊನೆಯ ದಿನವಾದ ಇಂದೂ ಕೂಡ ಅಕ್ರಮ ಪ್ರಕರಣಗಳಿಗೇನು ಕಡಿಮೆ ಇರಲಿಲ್ಲ. ಜಿಲ್ಲೆಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 200 ಬಾಕ್ಸ್ ಮದ್ಯವನ್ನು ಚುನಾವಣಾಧಿಕಾರಿಗಳು ಮತ್ತು ಅಬಕಾರಿ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ, ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿಯ ಮೇರೆಗೆ ದಾಳಿ ಹಾಸನ ಇಂಡಸ್ಟ್ರಿಯಲ್ ಏರಿಯಾದ ಪುಷ್ಪಗಿರಿ ಗ್ರಾನೈಟ್ ಪ್ಯಾಕ್ಟರಿ ಮೇಲೆ ದಾಳಿ ನಡೆಸಿದರು. ಈ ವೇಳೆ ಅಕ್ರಮವಾಗಿ ಅಡಗಿಸಿಟ್ಟಿದ್ದ, 30 ಬಾಕ್ಸ್ ಮದ್ಯವನ್ನು ವಶ ಪಡಿಸಿಕೊಂಡಿದ್ದಾರೆ.
ಇನ್ನೂ ಜಿಲ್ಲೆಯಲ್ಲಿ ಬಾರಿ ಜಿದ್ದಾಜಿದ್ದಿ ಕ್ಷೇತ್ರವಾದ ಹಾಸನ, ಹೊಳೆನರಸೀಪುರ ಹಲವೆಡೆ ದಾಳಿ ನಡೆಸಿದ ಚುನಾವಣಾಧಿಕಾರಿಗಳು, ಹಳೆಕೋಟೆ ಹೋಬಳಿ ಕಲ್ಲೇನಹಳ್ಳಿ ಮೀನು ರಾಜು ಎಂಬುವರಿಗೆ ಸೇರಿದ 10ಬಾಕ್ಸ್ ಮದ್ಯ. ಚಾಕೇನಹಳ್ಳಿಯಲ್ಲಿ 82ಬಾಕ್ಸ್, ಮಾರಶೆಟ್ಟಿಹಳ್ಳಿ ಯಲ್ಲಿ 80ಬಾಕ್ಸ್ ಸೇರಿದಂತೆ ಒಟ್ಟು 200 ಬಾಕ್ಸ್ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಕೈಗೊಂಡಿದ್ದಾರೆ...