Top

ಸಿದ್ದರಾಮಯ್ಯ ಸರಕಾರದ ವಿರೋಧಿ ಅಲೆ: ಅಮಿತ್ ಶಾ

ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರದ ಆಡಳಿತ ಕೆಟ್ಟ ಪರಿಸ್ಥಿತಿ ಆಗಿದ್ದು, ಜನ ವಿರೋಧಿ ಗಮನಿಸಿದ್ದೇವೆ. ಸ್ವತಃ ಸಿದ್ದರಾಮಯ್ಯ ಅವರಿಗೆ ಗೆಲುವಿನ ವಿಶ್ವಾಸ ಇಲ್ಲ. ಹಾಗಾಗಿ ಎರಡು ಕಡೆ ಸ್ಪರ್ಧಿಸುತ್ತಿದ್ದಾರೆ. ಚಾಮುಂಡೇಶ್ವರಿ ಹಾಗೂ ಬಾದಾಮಿ ಎರಡೂ ಕ್ಷೇತ್ರಗಳಲ್ಲಿ ಸೋಲಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾದ್ಯಂತ 52 ಸಾವಿರ ಕಿ.ಮೀ. ಪ್ವಾಸ ಕೈಗೊಂಡಿದೆ. ಈ ವೇಳೆ ಎಲ್ಲಾ ಕಡೆ ಕಾಂಗ್ರೆಸ್ ವಿರೋಧಿ ಅಲೆ ಕಂಡು ಬಂದಿದೆ. ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಜನರು ತಕ್ಕ ಬುದ್ಧಿ ಕಲಿಸಲಿದ್ದಾರೆ ಎಂದರು.

ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಶೇ.173ರಷ್ಟು ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿವೆ. ಆದರೆ ಬಿಜೆಪಿ ಆಡಳಿತದ ಮಹಾರಾಷ್ಟ್ರದಲ್ಲಿ ಶೇ.43ಕ್ಕೆ ಇಳಿದಿದೆ ಎಂದು ಶಾ ಹೇಳಿದರು.

ಬೆಂಗಳೂರಿನ ಸಚಿವರಾದ ಕೆ.ಜೆ. ಜಾರ್ಜ್​, ಹ್ಯಾರಿಸ್ ಹಾಗೂ ರೋಷನ್​ ಬೇಗ್ ವಿರುದ್ಧ ಶಾಸಕರು ಅಸಮಾಧಾನ ಗೊಂಡಿದ್ದಾರೆ. ಈ ಮೂವರಿಂದ ಬೆಂಗಳೂರಿನ ಆಡಳಿತ ದುರಾವಸ್ಥೆಗೊಂಡಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಶಾ ಆರೋಪಿಸಿದರು.

Next Story

RELATED STORIES