Top

ವಿದ್ವತ್ ಮೇಲೆ ನಲಪಾಡ್ ನಿಂದ ಹಲ್ಲೆ ಪ್ರಕರಣ: ಚಾರ್ಜ್ ಶೀಟ್ ಸಲ್ಲಿಕೆ

ವಿದ್ವತ್ ಮೇಲೆ ನಲಪಾಡ್ ಹ್ಯಾರಿಸ್ ನಿಂದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಿಸಿಬಿ ತನಿಖಾಧಿಕಾರಿಗಳು ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.ಸಿಸಿಬಿ ಎಸಿಎಂಎಂ ಕೋರ್ಟ್ ಗೆ 600 ಪುಟಗಳ ಚಾರ್ಚ್ ಶೀಟ್ ಸಲ್ಲಿಸಿದ್ದು,ಇದರೊಂದಿಗೆ ವೈದ್ಯಕೀಯ ವರದಿ, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಹಾಗೂ ಸಿಸಿಟಿವಿ ದೃಶ್ಯಗಳನ್ನು ಸಹ ಲಗತ್ತಿಸಲಾಗಿದೆ. ನಲಪಾಡ್ , ಅರುಣ್ ಬಾಬು , ಶ್ರೀ ಕೃಷ್ಣ, ಮಂಜುನಾಥ್ , ಅಶ್ರಫ್ , ಬಾಲಕೃಷ್ಣ , ಅಭಿಶೇಕ್ ಮತ್ತು ನಾಸಿರ್ ವಿರುದ್ದ ಆರೋಪ ಪಟ್ಟಿ ಸಲ್ಲಿಸಲಾಗಿದೆ.ಮತ್ತೊಬ್ಬ ಆರೋಪಿ ಕೃಷ್ಣ ೨೦೧೪ ರಿಂದಲೂ ಮೊಬೈಲ್ ಬಳಸ್ತಿಲ್ಲ, ವಿದೇಶದಲ್ಲಿ ಅಡಗಿರಬಹುದು. ಹುಡುಕಾಟ ನಡೆಸುತ್ತಿದ್ದೇವೆ‌ ಅಂತಾ ಉಲ್ಲೇಖಿಸಲಾಗಿದೆ. ಫೆಬ್ರವರಿ 17ರಂದು ಯುಬಿ ಸಿಟಿಯ ಫರ್ಜಿ ಕೆಫೆಯಲ್ಲಿ ವಿದ್ವತ್ ನ ಮೇಲೆ ನಲಪಾಡ್ ಮತ್ತವನ ಗ್ಯಾಂಗ್ ಹಲ್ಲೆ ನಡೆಸಿತ್ತು. ಈ ಕಾರಣಕ್ಕಾಗಿ ನಲಪಾಡ್ ಟೀಂಗೆ ಜೈಲು ಶಿಕ್ಷೆ ವಿಧಿಸಲಾಗಿತ್ತು. ಆರೋಪಿಗಳ ಮೇಲೆ ದಾಖಲಾಗಿದ್ದ ಕೊಲೆ ಯತ್ನ ಸಾಬೀತಾಗಿದ್ದು , ಸಂಬಂಧಪಟ್ಟ ಪುರಾವೆಗಳನ್ನ ಲಗತ್ತಿಸಲಾಗಿದೆ. ವಿದ್ವತ್ , ಆತನ ಸ್ನೇಹಿತರು, ಫರ್ಜಿ ಕೆಫೆ ಸಿಬ್ಬಂಧಿ , ಮಲ್ಯ ಆಸ್ಪತ್ರೆ ಸಿಬ್ಬಂಧಿ ಸೇರಿದಂತೆ ೬೦ ಸಾಕ್ಷಿಗಳ ಹೇಳಿಕೆ ಸಂಗ್ರಹಿಸಲಾಗಿದೆ. ಇನ್ನಷ್ಟೇ ದೋಷಾರೋಪ ಪಟ್ಟಿ ಮೇಲೆ ವಿಚಾರಣೆ ಆರಂಭವಾಗಬೇಕಿದೆ.

Next Story

RELATED STORIES