Top

ಲಾಸ್ಟ್ ಡೇ ರೋಡ್ ಶೋ

ಲಾಸ್ಟ್ ಡೇ ರೋಡ್ ಶೋ
X

ರಾಜ್ಯ ವಿಧಾನಸಭೆ ಚುನಾವಣೆಗೆ ಕೇವಲ ಎರಡೇ ದಿನ ಬಾಕಿ ಇದ್ದು, ಸಂಜೆ 5ಗಂಟೆಯ ಮೇಲೆ ಕ್ಯಾಂಪೇನ್ ನಿಷೇಧಿಸಲಾಗಿದೆ. ಹೊರರಾಜ್ಯದಿಂದ ಪ್ರಚಾರಕ್ಕೆಂದು ಬಂದಿದ್ದ ನಾಯಕರೆಲ್ಲ ಇಂದು ಸಂಜೆ 5ಗಂಟೆಯೊಳಗೆ ರಾಜ್ಯದಿಂದ ಹೊರಹೋಗಬೇಕು. ಈ ಕಾರಣಕ್ಕಾಗಿ ಲಾಸ್ಟ್ ಡೇ ರೋಡ್ ಶೋ ಜೋರಾಗಿದೆ.ಅಲ್ಲದೇ ಸುದ್ದಿಗೋಷ್ಠಿ ಕರೆದು ಚುನಾವಣೆ ಪ್ರಚಾರ ನಡೆಸಿದ್ದಾರೆ.

ಬೆಂಗಳೂರಿನ ಬಿಟಿಎಂ ಲೇಔಟ್ ಕ್ಷೇತ್ರದಲ್ಲಿ ಕೇಂದ್ರ ಸಚಿವ ಅನಂತ್ ಕುಮಾರ್ ರೋಡ್ ಶೋ ನಡೆಸಿ, ಲಲ್ಲೇಶ್ ರೆಡ್ಡಿ ಪರ ಮತಯಾಚಿಸಿದರು. ಶಾಂತಿನಗರದಲ್ಲಿ ಬಿಜೆಪಿ ಅಭ್ಯರ್ಥಿ ಪರ ನಿರ್ಮಲಾ ಸೀತಾರಾಮನ್ ಪ್ರಚಾರ ನಡೆಸಿದರು. ಪದ್ಮನಾಭನಗರದ ಬಿಜೆಪಿ ಅಭ್ಯರ್ಥಿ ಪರ ಆರ್.ಅಶೋಕ್ ರೋಡ್ ಶೋ ನಡೆಸಿ, ಮತಯಾಚಿಸಿದರು. ಅಲ್ಲದೇ ಮಲ್ಲೇಶ್ವರಂ ಬಿಜೆಪಿ ಅಭ್ಯರ್ಥಿ ಅಶ್ವಥ್ ನಾರಾಯಣ್ ಕೂಡ ಭರ್ಜರಿ ಮತಪ್ರಚಾರ ನಡೆಸಿದರು.

ಇನ್ನು ಹೈವೋಲ್ಟೇಜ್ ಕ್ಷೇತ್ರವಾದ ಬಾಗಲಕೋಟೆಯ ಬಾದಾಮಿಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಪರ ಬಿಎಸ್ ಯಡಿಯೂರಪ್ಪ, ಅಮಿತ್ ಶಾ ರೋಡ್ ಶೋ ನಡೆಸಿ, ಪ್ರಚಾರ ಮಾಡಿದರು.ಇನ್ನು ಹಲವೆಡೆ ಚಿತ್ರರಂಗದ ಗಣ್ಯರು ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು.ಈ ಜಿದ್ದಾಜಿದ್ದಿನ ಪ್ರಚಾರದ ಭರಾಟೆಯಲ್ಲಿ, ವಿಜಯಲಕ್ಷ್ಮಿ ಯಾರಿಗೆ ಒಲಿಯುತ್ತಾಳೆ ಎಂಬುದನ್ನು ಕಾದು ನೋಡಬೇಕು.

Next Story

RELATED STORIES