Top

ರಾಜಕಾರಣದಿಂದ ಸಿನಿಮಾದತ್ತ ಉಪೇಂದ್ರ ಯುಟರ್ನ್

ರಾಜಕಾರಣದಿಂದ ಸಿನಿಮಾದತ್ತ ಉಪೇಂದ್ರ ಯುಟರ್ನ್
X

ಫಿಲ್ಮಂ ಡೆಸ್ಕ್ : ಉಪೇಂದ್ರ ಅಂದ್ರೆ ಡಿಫರೆಂಟ್, ಡಿಫರೆಂಟ್ ಅಂದ್ರೆ ಉಪೇಂದ್ರ. ಏನೇ ಮಾಡಿದ್ರೂ ಅದು ವಿಭಿನ್ನವಾಗಿ ನಿವೂತನವಾಗಿರಬೇಕು ಅನ್ನೋದು ರಿಯಲ್ ಸ್ಟಾರ್ ರಿಯಲ್ ಆಶಯ. ಅದ್ರಂತೆ ಇತ್ತೀಚೆಗೆ ಬಣ್ಣದಲೋಕಕ್ಕೆ ಗುಡ್​ ಬೈ ಹೇಳಿ ರಾಜಕಾರಣಕ್ಕೆ ಧುಮುಕುವ ಮಹದಾಸೆ ಇಟ್ಟುಕೊಂಡಿದ್ದ ಬಹುಭಾಷಾ ನಟ ಉಪೇಂದ್ರ, ಇದೀಗ ದಿಢೀರ್ ಅಂತ ಮತ್ತೆ ಸಿನಿಮಾದತ್ತ ಯುಟರ್ನ್​ ಹೊಡೆದಿದ್ದಾರೆ. ಹೊಸ ಸಿನಿಮಾದ ಮೂಲಕ ಮತ್ತೆ ಯೂತ್ಸ್ ಮನದಲ್ಲಿ ಕಿಚ್ಚತ್ತಿಸೋಕೆ ಶುರುವಿಟ್ಟಿದ್ದಾರೆ.

A ಮತ್ತು ಉಪೇಂದ್ರ ಸಿನಿಮಾಗಳಲ್ಲಿ ಡಿಫ್ರೆಂಟ್ ಪ್ರೀತಿ ಪಾಠ ಹೇಳಿದ್ದ ಗಾಡ್​ಫಾದರ್, ಇದೀಗ ಹೆಂಗೆಳೆಯರಿಗೆ ಮತ್ತೆ ರಿಯಲ್ ಪ್ರೀತಿ ಪಾಠ ಹೇಳೋಕೆ ಬರ್ತಿದ್ದಾರೆ. ಅದ್ರಲ್ಲೂ ಐ ಲವ್ ಯು ಅಂತ ಬರ್ತಿರೋದು ಎಲ್ಲರ ಕುತೂಹಲ ಕೆರಳಿಸಿದೆ. ಐ ಮತ್ತು ಯು ನಡುವೆ ಡಿಫ್ರೆಂಟ್ ಲವ್ ಸಿಂಬಲ್ ಇರೋ ಸಿನಿಮಾ ಈ ಐಲವ್​ಯು.

ಅಂದಹಾಗೆ ಟೈಟಲ್ ಡಿಫ್ರೆಂಟ್ ಆಗಿದೆ ಅಂದ್ರೆ ಇಲ್ಲಿ ಉಪೇಂದ್ರ ನಟಿಸಿ, ನಿರ್ದೇಶಿಸುತ್ತಿಲ್ಲ. ಬರೀ ನಟನೆಗಷ್ಟೇ ಸೀಮಿತವಾಗಲಿರೋ ಉಪೇಂದ್ರರ ಈ ಸಿನಿಮಾದ ಸೂತ್ರಧಾರ ಸ್ಟಾರ್ ಡೈರೆಕ್ಟರ್ ಆರ್.ಚಂದ್ರು. ಹೌದು, ಈ ಹಿಂದೆ ಬ್ರಹ್ಮ ಸಿನಿಮಾ ಮಾಡಿದ್ದ ಆರ್ ಚಂದ್ರು ಮತ್ತು ರಿಯಲ್ ಸ್ಟಾರ್ ಉಪೆಂದ್ರ, ಇದೀಗ ಈ ಲವ್ ಯು ಸಿನಿಮಾಗಾಗಿ ಮತ್ತೊಮ್ಮೆ ಒಂದಾಗ್ತಿದ್ದಾರೆ. ಒನ್ ಆಫ್ ದ ಮೋಸ್ಟ್ ಫ್ಯಾಷನೇಟ್ ಡೈರೆಕ್ಟರ್ ಅನಿಸಿಕೊಂಡಿರೋ ಚಂದ್ರು, ಈ ಸಿನಿಮಾನ ಬ್ರಹ್ಮ ಚಿತ್ರಕ್ಕಿಂತ ಕಲರ್​ಫುಲ್ ಮತ್ತು ರಿಚ್ ಆಗಿ ಮಾಡೋ ಯೋಜನೆಯಲ್ಲಿದ್ದಾರೆ.

ಟೈಟಲ್ ಜೊತೆ ಉಪೇಂದ್ರರ ಫಸ್ಟ್ ಲುಕ್ ಕೂಡ ರಿವೀಲ್ ಮಾಡಿರೋ ಚಂದ್ರು ಅಂಡ್ ಟೀಂ, ಪೋಟೋಶೂಟ್​ನ ತುಂಬಾ ಸ್ಟೈಲಿಶ್ ಆಗಿ ಮತ್ತು ವಿಭಿನ್ನವಾಗಿ ಮಾಡಿಸಿದೆ. ಅದ್ರಲ್ಲೂ ಮುಂಬೈನ ಸ್ಟಾರ್ ಛಾಯಾಗ್ರಾಹಕ ಅಜಿತ್ ಕ್ಯಾಮೆರಾದಲ್ಲಿ ಉಪ್ಪಿ ಸೆರೆಯಾಗಿರೋ ಪರಿ ಇಂಟರೆಸ್ಟಿಂಗ್ ಅನಿಸಿದೆ. ಇನ್ನು ಉಪ್ಪಿ ಜುಟ್ಟು ಸ್ಟೈಲ್ ಎಂದಿನಂತೆ ಸ್ಪೆಷಲ್ ಅನಿಸಿದೆ.

ಟೈಟಲ್​ ಹೇಳಿದಂತೆ ಇದೊಂದು ಯೂತ್​ಫುಲ್ ಲವ್ ಸ್ಟೋರಿ. ಇಂದಿನ ಯಂಗ್ ಜನರೇಷನ್​ಗೆ ಇಷ್ಟವಾಗೋ ರೀತಿಯಲ್ಲಿರಲಿರೋ ಡಿಫ್ರೆಂಟ್ ಪ್ರೇಮ್ ಕಹಾನಿ. ಪ್ರೀತಿಗೆ ಬೇರೆ ಬೇರೆ ವ್ಯಾಖ್ಯಾನಗಳನ್ನ ಕೊಟ್ಟಿರೋ ಉಪ್ಪಿ, ಇಲ್ಲಿ ಮತ್ಯಾವ ರೀತಿ ಕಾಣಿಸಿಕೊಳ್ತಾರೆ..? ಮತ್ತೇನನ್ನ ಹೇಳ್ತಾರೆ ಅನ್ನೋ ಕುತೂಹಲ.

ಉಪ್ಪಿ- ಚಂದ್ರು ಕಾಂಬೋನ ಈ ಸಿನಿಮಾದಲ್ಲಿ ನಾಲ್ಕು ಮೈನವಿರೇಳಿಸೋ ಸ್ಟಂಟ್ಸ್ ಇರಲಿವೆಯಂತೆ. ಅದ್ರಲ್ಲಿ ಉಪೇಂದ್ರ ಇಂಟ್ರಡಕ್ಷನ್ ಫೈಟ್ ಚಾಪರ್​ಗಳಲ್ಲಿ ನಡೆಯಲಿದೆ ಅನ್ನೋದು ವಿಶೇಷ. ಬಾಹುಬಲಿ, ರೋಬೋ, 2.O ಅಂತಹ ಬಿಗ್ ಬಜೆಟ್ ಸಿನಿಮಾಗಳಿಗೆ ಸಾಹಸ ಸಂಯೋಜಿಸಿದ್ದ ಇಂಟರ್ ನ್ಯಾಷನಲ್ ಫೈಟ್ ಮಾಸ್ಟರ್ ಪೀಟರ್ ಹೇನ್, ಈ ಚಿತ್ರಕ್ಕೆ ಸ್ಟಂಟ್ಸ್ ಕಂಫೋಸ್ ಮಾಡ್ತಿದ್ದಾರೆ ಅನ್ನೋದು ಮತ್ತೊಂದು ವಿಶೇಷ.

ಸಿನಿಮಾ ಮಾಡೋದ್ರಲ್ಲಿ ಯಾವುದೇ ಕಾರಣಕ್ಕೂ ಕಾಂಪ್ರಮೈಸ್ ಆಗದ ಚಂದ್ರು, ಕ್ವಾಲಿಟಿ ಸಿನಿಮಾ ಕೊಡೋದ್ರಲ್ಲಿ ಮುಂದಿರ್ತಾರೆ. ಬಂಡವಾಳಕ್ಕಿಂತ ಹೆಚ್ಚಾಗಿ ನೋಡುಗರಿಗೆ ಒಂದೊಳ್ಳೆ ವಿಷ್ಯುವಲ್ ಟ್ರೇಟ್ ಕೊಡ್ತಾರೆ ಚಂದ್ರು. ಈಗಾಗ್ಲೇ ಸಾಕಷ್ಟು ಚಿತ್ರಗಳಲ್ಲಿ ಅದನ್ನ ಪ್ರೂವ್ ಮಾಡಿರೋ ಚಂದ್ರು, ಈ ಸಿನಿಮಾನ ಈ ಹಿಂದಿನ ಎಲ್ಲಾ ಸಿನಿಮಾಗಳಿಗಿಂತ ರಿಚ್ ಆಗಿ ಮಾಡಲಿದ್ದಾರಂತೆ. ಅದ್ರಂತೆ ಕನ್ನಡದಲ್ಲಿ ಅವರೇ ಹೋಮ್ ಬ್ಯಾನರ್​ನಲ್ಲಿ ನಿರ್ಮಿಸ್ತಿದ್ದಾರೆ.

ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ, ಟಿವಿ5

Next Story

RELATED STORIES