Top

ಯೋಗೀಶ್ ಬಾಬು ಪರ ನಟಿ ರಮ್ಯಾ, ರಾಹುಲ್ ಪ್ರಚಾರ

ಮೊಳಕಾಲ್ಮೂರು : ಶ್ರೀರಾಮುಲು ಸ್ಪರ್ಧೆಯಿಂದ ಕುಖ್ಯಾತಿಯ ಜೊತೆಗೆ ಪ್ರತಿಷ್ಠಿತ ಕ್ಷೇತ್ರ ಎನಿಸಿಕೊಂಡಿರುವ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ರಾಜ್ಯ ಅಲ್ಲದೆ ರಾಷ್ಟ್ರ ಮಟ್ಟದಲ್ಲಿಯೂ ಗಮನ ಸೆಳೆದಿದೆ. ಇಲ್ಲಿ ರಾಮುಲು ಸೋಲುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿರುವ ಹಿನ್ನೆಲೆಯ ನಡುವೆ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ ಬಾಬು ಬಗ್ಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.

ಖುದ್ದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಶ್ರೀರಾಮುಲು ರಂತ ಘಟಾನುಘಟಿ ಹಾಗೂ ಶ್ರೀಮಂತನ ಎದುರು ಕಾಂಗ್ರೆಸ್ ನ ಸಾಮಾನ್ಯ ಕಾರ್ಯಕರ್ತ, ಯುವ ಕಾಂಗ್ರೆಸ್ ನಾಯಕ ಯೋಗೇಶ್ ಬಾಬು ರನ್ನು ಕಣಕ್ಕಿಳಿಸಿ ತೀವ್ರ ಸ್ಪರ್ಧೆಯನ್ನ ಒಡ್ಡಿದ್ದೇವೆ ಎಂದು ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಅಲ್ಲದೆ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ನಟಿ ರಮ್ಯಾ ಸಹಾ ಯೋಗೇಶ್ ಬಾಬು ಬಗ್ಗೆ ಪ್ರಶಂಸೆಯ ಮಾತುಗಳನ್ನು ಆಡಿದ್ದು ಮೊಳಕಾಲ್ಮೂರಿನಲ್ಲಿ ಈ ಬಾರಿಯ ಚುನಾವಣೆ ಗಣಿ ಅಕ್ರಮದ ಆರೋಪಿತ ಹಣವಂತ ರೆಡ್ಡಿ ಸಹೋದರರ ಆಪ್ತ ರಾಮುಲು ವಿರುದ್ಧವಾಗಿದ್ದು ಯುವ ಕಾಂಗ್ರೆಸ್ ನ ನಮ್ಮ ಅಭ್ಯರ್ಥಿ ಯೋಗೇಶ್ ಬಾಬು ಗೆ ತನು-ಮನ-ಧನ ಸಹಕಾರ ನೀಡಿ ಎಂದು ತಮ್ಮ ಫೇಸ್ ಬುಕ್ ನಲ್ಲಿ ಲೈವ್ ಹೇಳಿಕೆಯನ್ನೂ ನೀಡಿದ್ದಾರೆ.

ಇದೆಲ್ಲ ಯೋಗೇಶ್ ಬಾಬುಗೆ ವಿಶೇಷ ವರವಾಗಿ ಪರಿಣಮಿಸಿದ್ದು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳುವುದರ ಜೊತೆಗೆ ಶ್ರೀರಾಮುಲು ವಿರುದ್ಧ ಗೆದ್ದು ಇತಿಹಾಸ ನಿರ್ಮಿಸುವ ತವಕವನ್ನು ಹೆಚ್ಚಿಸಿದೆ. ಈ ನಡುವೆ ಇಂದು ಪ್ರಚಾರರ ಕೊನೆ ದಿನವಾಗಿದ್ದು ಅಂತಿಮ ಕ್ಷಣದ ಅಬ್ಬರ ರೋಡ್ ಶೋಗಳನ್ನು ಪ್ರತಿ ಗ್ರಾಮಗಳಲ್ಲೂ ಯೋಗೇಶ್ ಬಾಬು ನಡೆಸುತ್ತಿದ್ದಾರೆ.

Next Story

RELATED STORIES