Top

ಮೋದಿ ಅಲೆಗೆ ಬ್ರೇಕ್ ಹಾಕ್ತಾರಾ ಕುರಿ ಕಾಯೋರ ಮಗ : ವಾಷಿಂಗ್ಟನ್​ ಪೋಸ್ಟ್​ನಲ್ಲಿ ಸಿದ್ದು

ಕಳೆದ ನಾಲ್ಕು ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರ ಅಲೆಯಲ್ಲಿ ತೇಲುತ್ತಿರುವ ಬಿಜೆಪಿ ದಕ್ಷಿಣ ಭಾರತದಲ್ಲಿ ಮರಳಿ ಅಧಿಕಾರ ಸ್ಥಾಪಿಸಲು ಹರಸಾಹಸ ಪಡುತ್ತಿದ್ದು, ಕುರಿ ಕಾಯುವವ ಮಗನಾದ ಸಿದ್ದರಾಮಯ್ಯ ತಡೆಯೊಡ್ಡುವರೇ ಎಂಬ ಪ್ರಶ್ನೆ ಇಟ್ಟುಕೊಂಡು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಈ ಮೂಲಕ ಮೋದಿ ಹಾಗೂ ಸಿದ್ದರಾಮಯ್ಯ ನಡುವಿನ ಹೋರಾಟ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.

ದೇಶಾದ್ಯಂತ ಮೋದಿ ಅಲೆ ಇದ್ದು, 5 ತಿಂಗಳ ಹಿಂದಿನವರೆಗೂ ಉತ್ತರ ಭಾರತದ ಜನತೆಗೆ ಸಿದ್ದರಾಮಯ್ಯ ಯಾರು ಎಂಬುದೇ ಗೊತ್ತಿರಲಿಲ್ಲ. ಆದರೆ ಕರ್ನಾಟಕ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಸಿದ್ದರಾಮಯ್ಯ ಹೆಸರು ಎಲ್ಲೆಡೆ ಕೇಳಿ ಬರತೊಡಗಿದೆ. ಮೋದಿ ಅಲೆಗೆ ಸಿದ್ದರಾಮಯ್ಯ ತಡೆಯೊಡ್ಡುವರೇ ಎಂಬ ಪ್ರಶ್ನೆ ಎಲ್ಲರನ್ನೂ ಕಾಡತೊಡಗಿದೆ.

ಕುರಿ ಕಾಯುವಂತ ಅತ್ಯಂತ ಕೆಳವರ್ಗದಿಂದ ಬಂದಿರುವ ಸಿದ್ದರಾಮಯ್ಯ ಇಂದು ದೇಶದ ಪ್ರಮುಖ ಆಕರ್ಷಣೆಯಾಗಿದ್ದಾರೆ. ಮೋದಿ ಅವರಿಗೆ ಸೂಕ್ತ ರೀತಿಯಲ್ಲಿ ಸೆಡ್ಡು ಹೊಡೆಯುತ್ತಿರುವುದು ಎಲ್ಲರ ಚರ್ಚೆಗೆ ಕಾರಣವಾಗಿದೆ.

Next Story

RELATED STORIES