Top

ಭೀಕರ ಅಪಘಾತ, ಪೊಲೀಸ್ ಅಧಿಕಾರಿಗಳ ಸಾವು

ಬಾಗಲಕೋಟೆ: ಲಾರಿ ಮತ್ತು ಪೊಲೀಸ್ ಜೀಪ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ, ಇಬ್ಬರು ಪೊಲೀಸ್ ಅಧಿಕಾರಿ ಹಾಗೂ ಹೋಂ ಗಾರ್ಡ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಬಾಗಲಕೋಟೆಯ ಮಲ್ಲಾಪುರ ಕ್ರಾಸ್ ಬಳಿ ಈ ಘಟನೆ ನಡೆದಿದ್ದು, ಎಲೆಕ್ಷನ್ ಡ್ಯೂಟಿಗಾಗಿ ಬೆಂಗಳೂರಿನಿಂದ ಬಾಗಲಕೋಟೆಗೆ ಬರುತ್ತಿರುವಾಗ ಈ ದುರಂತ ಸಂಭವಿಸಿದೆ. ದುರ್ಘಟನೆಯಲ್ಲಿ ಡಿವೈಎಸ್.ಪಿ ಮರಿಲಿಂಗೇಗೌಡ (55), ಸಿಪಿಐ ಕೆ.ಎಚ್ ಶಿವಸ್ವಾಮಿ(55) ಹೋಂ ಗಾರ್ಡ್ ವೇಣುಗೋಪಾಲ್ (27) ಮೃತಪಟ್ಟಿದ್ದಾರೆ.108 ವಾಹನ ಮೂಲಕ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ಶವ ರವಾನಿಸಲಾಗಿದೆ.

Next Story

RELATED STORIES