Top

ಬಿಜೆಪಿಯಿಂದ ಕೈ ಜಾರಲಿದೆಯಾ ಲಿಂಗಾಯಿತರ ಓಟ್ ಬ್ಯಾಂಕ್..?

ಬಿಜೆಪಿಯಿಂದ ಕೈ ಜಾರಲಿದೆಯಾ ಲಿಂಗಾಯಿತರ ಓಟ್ ಬ್ಯಾಂಕ್..?
X

ಬಿಜೆಪಿ ವಿರುದ್ಧ ಲಿಂಗಾಯಿತರು ಅಭಿಯಾನ ಶುರುಮಾಡಿದ್ದಾರೆ. ಲಿಂಗಾಯಿತ ಧರ್ಮೀಯರು ಬಿಜೆಪಿಗೆ ಮತ ಹಾಕುವುದಿಲ್ಲವೆಂದು ಅಭಿಯಾನ ನಡೆಸಿದ್ದಾರೆ. ಚುನಾವಣೆಗೆ ಎರಡು ದಿನ ಬಾಕಿಯಿರುವಾಗಲೇ ಈ ಕ್ಯಾಂಪೇನ್ ಶುರುವಾಗಿದ್ದು,ಇದು ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ. ಪ್ರತ್ಯೇಕ ಧರ್ಮಕ್ಕೆ ವಿರೋಧಿಸಿದ್ದಕ್ಕಾಗಿ ಬಿಜೆಪಿ ಗೆ ನಮ್ಮ ಮತವಿಲ್ಲವೆಂದು ಸಾಮಾಜಿಕ ಜಾಲತಾಣಗಳ ಮೂಲಕ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಮೋದಿ ನಮ್ಮ ಹೋರಾಟವನ್ನು ಲಾಲಿಪಾಪ್ ಎಂದು ಕರೆದಿದ್ದಾರೆ. ಅಮಿತ್ ಷಾ ಪ್ರತ್ಯೇಕ ಧರ್ಮಕ್ಕೆ ಅವಕಾಶ ಕೊಡುವುದಿಲ್ಲವೆಂದಿದ್ದಾರೆ.ಹೀಗಾಗಿ ಬಿಜೆಪಿ ಮತ ನೀಡುವುದಿಲ್ಲ.ಪ್ರತ್ಯೇಕ ಧರ್ಮಕ್ಕೆ ಅವಕಾಶ ಕೊಟ್ಟವರಿಗೆ ನಮ್ಮ ಮತವೆಂದು ಅಭಿಯಾನ ಆರಂಭಿಸಿದ್ದಾರೆ.ಈ ಅಭಿಯಾನದಿಂದ ಲಿಂಗಾಯಿತರ ಓಟ್ ಬ್ಯಾಂಕ್ ಬಿಜೆಪಿ ಕೈ ಜಾರಬಹುದೆಂಬ ಅನುಮಾನ ಉಂಟಾಗಿದೆ.

Next Story

RELATED STORIES