Top

ಬಿಜೆಪಿಗೆ ಹಿಂದು ಪದದ ಅರ್ಥ ಗೊತ್ತಿಲ್ಲ: ರಾಹುಲ್

ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಮುಖಂಡರಿಗೆ ಹಿಂದು ಪದದ ನಿಜವಾದ ಅರ್ಥ ಗೊತ್ತಿಲ್ಲ ಎಂದು ಕಾಂಗ್ರೆಸ್ ಮಹರಾಜ ರಾಹುಲ್ ಗಾಂಧಿ ಹೇಳಿದ್ದಾರೆ.

ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾದ ಗುರುವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಎಲೆಕ್ಷನ್ ಹಿಂದು ಎಂದು ಬಿಜೆಪಿಯವರು ತಮ್ಮನ್ನು ನಿಂದಿಸುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ನಾನು ದೇವಸ್ಥಾನ, ಮಸೀದಿ, ಚರ್ಚ್​, ಗುರುದ್ವಾರ ಎಲ್ಲಾ ಕಡೆಯೂ ಭೇಟಿ ಕೊಡುತ್ತೇನೆ. ಆದರೆ ಸಮಾಜ ಒಡೆಯುವ ಸ್ಥಳಗಳಿಗೆ ಭೇಟಿ ನೀಡುವುದಿಲ್ಲ ಎಂದರು.

ಮೋದಿ ತಮ್ಮ ಭಾಷಣಗಳಲ್ಲಿ ವೈಯಕ್ತಿಕ ಟೀಕೆ ಮಾಡುತ್ತಿದ್ದಾರೆ. ಬಿಜೆಪಿ ಮುಖಂಡರೂ ಅಷ್ಟೇ. ಆದರೆ ನಾವು ವೈಯಕ್ತಿಕ ನಿಂದನೆ ಮಾಡುವುದಿಲ್ಲ. ಮೋದಿ ನನ್ನ ಬಗ್ಗೆ ಮಾತನಾಡುತ್ತಾರೆ. ಆದರೆ ಕರ್ನಾಟಕಕ್ಕೆ ಕೊಡುಗೆ ಏನು ಮಾತನಾಡುವುದಿಲ್ಲ. ನಮ್ಮ ಪ್ರಣಾಳಿಕೆಯಲ್ಲಿನ ಅರ್ಧದಷ್ಟು ವಿಷಯಗಳನ್ನು ಅವರು ಕದ್ದಿದ್ದಾರೆ. ನಮ್ಮ ಯೋಜನೆಗಳನ್ನೇ ಅವರು ಮುಂದುವರಿಸುವ ಮಾತನಾಡಿದ್ದಾರೆ ಎಂದು ರಾಹುಲ್ ಹೇಳಿದರು.

ಪ್ರಧಾನಿಯಾಗಿ ಘನತೆಗೆ ತಕ್ಕಂತೆ ಅವರು ಮಾತನಾಡಿಲ್ಲ. ಮೋದಿ ಅವರ ಭಾಷಣ ಕಾಮಿಡಿ ಶೋ ಆಗಿದೆ. ಬಸವಣ್ಣ ಮತ್ತು ಅಂಬೇಡ್ಕರ್ ಅವರ ಹೆಸರನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಇದು ನನ್ನ ಮತ್ತು ಮೋದಿ ನಡುವಿನ ಚುನಾವಣೆ ಅಲ್ಲ. ರಾಜ್ಯದಲ್ಲಿ ಕಾಂಗ್ರೆಸ್​ ಮಾಡಿದ ಸಾಧನೆ ಹಾಗೂ ಜೈಲಿಗೆ ಹೋಗಿ ಬಂದವರ ನಡುವಿನ ಚುನಾವಣೆ ಎಂದರು.

ಕಚ್ಚಾ ತೈಲ ಬೆಲೆ ಇಳಿದಿದೆ. ಆದರೆ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗುತ್ತಲೇ ಇದೆ. ಚೀನಾಗೆ ಭೇಟಿ ನೀಡಿದ ವೇಳೆ ಡೊಕ್ಲಾಂನಲ್ಲಿ ಚೀನಾ ಸೈನಿಕರ ಆಕ್ರಮಣ ಕುರಿತು ಚರ್ಚೆಯನ್ನೇ ಮಾಡಲಿಲ್ಲ. ದೇಶದಲ್ಲಿ ದಲಿತರ ಮೇಲೆ ನಡೆಯುತ್ತಿರುವ ಹಲ್ಲೆ ಬಗ್ಗೆ ಉತ್ತರ ನೀಡುವುದಿಲ್ಲ. ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣವನ್ನು ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ರಾಹುಲ್ ಆರೋಪಿಸಿದರು.

Next Story

RELATED STORIES