Top

ಬಾದಾಮಿಯಲ್ಲಿ ರಾಮುಲು ಪರ ಯಡಿಯೂರಪ್ಪ ಪ್ರಚಾರ : ಸಿಎಂ ವಿರುದ್ಧ ಆಕ್ರೋಶ

ಬಾಗಲಕೋಟೆ : ಬಾದಾಮಿ ಶಿವಯೋಗ ಮಂದಿರ ವೀರಶೈವ ಮಹಾಸಭಾ ಸಂಸ್ಥಾಪಕ ಹಾನಗಲ್ಲ ಕುಮಾರಸ್ವಾಮಿಗಳ ಐಕ್ಯ ಸ್ಥಳ. ಸಿಎಂ ಸಿದ್ದರಾಮಯ್ಯ ಲಿಂಗಾಯತ ವೀರಶೈವರನ್ನ ಒಡೆದು ಆಳಲು ಹೋಗಿ ಮಹಾ ತಪಸ್ವೀ, ದಾರ್ಶನಿಕ ಹಾನಗಲ್ಲ ಕುಮಾರಸ್ವಾಮಿಯವರಿಗೆ ಅಪಮಾನ ಮಾಡಿದ್ದಾರೆ. ಅವರನ್ನ ಜನತೆ ಎಂದೂ ಕ್ಷಮಿಸೋದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.

ಶ್ರೀರಾಮುಲು ಪರ ಪ್ರಚಾರಕ್ಕಾಗಿ ಜಿಲ್ಲೆಯ ಬಾದಾಮಿಗೆ ಆಗಮಿಸಿದ ಅವ್ರು, ಯಡಿಯೂರಪ್ಪರನ್ನು ಮುಖ್ಯಮಂತ್ರಿ ಮಾಡಬಾರದು ಎನ್ನುವ ಒಂದೇ ಒಂದು ಕಾರಣಕ್ಕೆ ಜಾತಿಯ ವಿಷಬೀಜ ಬಿತ್ತುವ ಕೆಲಸ ಸಿದ್ದರಾಮಯ್ಯ ಮಾಡಿದ್ದಾರೆ. ಇದನ್ನು ಜನ ಕುಂತಲ್ಲಿ ನಿಂತಲ್ಲಿ ಖಂಡಿಸುತ್ತಿದ್ದಾರೆ. ಬಾದಾಮಿ ಚುನಾವಣೆಯಲ್ಲಿ ಸಿಎಂ ನೂರಕ್ಕೆ ನೂರು ಸೋಲು ಅನುಭವಿಸಿ, ವಾಲ್ಮೀಕಿ ಸಮಾಜದ ನಾಯಕ ಶ್ರೀರಾಮುಲು 25 ಸಾವಿರ ಅಂತರದಲ್ಲಿ ಗೆಲ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ರು.

ಅಲ್ಲದೇ ನಾನು ಮುಖ್ಯಮಂತ್ರಿ ಅದ ಕೆಲವೇ ದಿನಗಳಲ್ಲಿ ಬಾದಾಮಿ, ಪಟ್ಟದಕಲ್ಲು ಐಹೊಳೆ ಕ್ಷೇತ್ರದ ಅಭಿವೃದ್ಧಿಗಾಗಿ 200 ಕೋಟಿ ಹಣ ನೀಡಲಿದ್ದೇನೆ. ಮೇ 17 ರಂದು ನಾನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತೇನೆ. ಮುಖ್ಯಮಂತ್ರಿಯಾಗಿ ಪ್ರಮಾಣ ವಚನಸ್ವೀಕರಿಸಿದ ಪ್ರಥಮ ಕ್ಯಾಬಿನೆಟ್ಟಿನಲ್ಲಿ ರಾಷ್ಟ್ರೀಕೃತ ಹಾಗೂ ಸ್ಥಳಿಯ ಸಂಸ್ಥೆಗಳ 1 ಲಕ್ಷದ ವೆರೆಗೆ ರೈತರ ಸಾಲಮನ್ನಾ ಮಾಡುತ್ತೇನೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ರು.

ಇನ್ನು ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲು ನಿಶ್ಚಿತ ಎಂದು ಗೊತ್ತಾಗಿ ಬಾದಾಮಿಗೆ ಕದ್ದು ಮುಚ್ಚಿ ಬಂದು ನಾಮಪತ್ರ ಸಲ್ಲಿಸಿದ್ದಾರೆ. ಇಲ್ಲೂ ಅವ್ರು ಸೋಲು ಅನುಭವಿಸಲಿದ್ದಾರೆ. ಅಲ್ಲದೇ ಜಗತ್ತು ಕಂಡ ಶ್ರೇಷ್ಠ ನಾಯಕ ಮೋದಿಯವ್ರ ಬಗ್ಗೆ ಸಿದ್ಧರಾಮಯ್ಯ ಬಹಳಹಗುರವಾಗಿ ಮಾತನಾಡ್ತಾ, ಮೋದಿ ಅವ್ರ ಮೇಲೆ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಇನ್ನೇನು ಐದು ದಿನದಲ್ಲಿ ಮನೆಗೆ ಹೋಗುವವರ ಬಗ್ಗೆ ಹೆಚ್ಚು ಮಾತನಾಡುವ ಅಗತ್ಯವಿಲ್ಲ. ಪ್ರಧಾನಿಯವರಿಗೆ ಹಗುರವಾಗಿ ಮಾತನಾಡಿದ್ದಕ್ಕೆ ಸಿಎಂ ಗೆ ತಕ್ಕ ಪಾಠ ಕಲಿಸಬೇಕಾಗುತ್ತೆ. ರಾಜ್ಯದ ಜನತೆಗೆ ಸ್ವಚ್ಛ ಪ್ರಮಾಣಿಕ ಹಾಗೂ ಧಕ್ಷ ಆಡಳಿತ ಕೊಡುತ್ತೇವೆ. ಹೀಗಾಗಿ ರಾಜ್ಯದ ಜನ ನಮಗೆ ಆಶಿರ್ವಾದ ಮಾಡಿ ಎಂದ ಬಿಎಸ್.ವೈ ಮನವಿ ಮಾಡಿದ್ರು. ಬಿಎಸ್.ವೈ ಜೊತೆ ಕೇಂದ್ರ ಸಚಿವ ರಮೇಶ್ ಜಿಗಜಿನಗಿ, ಸಂಸದ ಗದ್ದಿಗೌಡರ್, ಮಾಜಿ ಶಾಸಕ ಪಿ.ಎಚ್ಪುಜಾರ್ ಸೇರಿದಂತೆ ಜಿಲ್ಲೆಯ ಅನೇಕ ನಾಯಕರು ಬಿಎಸ್.ವೈ ಸಾಥ್ ನೀಡಿದ್ರು.

Next Story

RELATED STORIES