Top

ಬಹಿರಂಗ ಪ್ರಚಾರಕ್ಕೆ ತೆರೆ : ಎಲ್ಲೆಲ್ಲೂ ಚುನಾವಣಾ ಆಯೋಗದ ಕಟ್ಟೆಚ್ಚರ

ಬೆಂಗಳೂರು : ರಾಜ್ಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ 14ನೇ ವಿಧಾನಸಭಾ ಚುನಾವಣೆಗೆ ಬಂಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಇಂದು ಸಂಜೆ 6 ಗಂಟೆಯಿಂದ ಬಹಿರಂಗ ಪ್ರಚಾರ ಕೊನೆಗೊಂಡಿದೆ. ಈ ಕುರಿತು ಸುದ್ದಿಗೋಷ್ಟಿ ನಡೆಸಿ ರಾಜ್ಯ ಚುನಾವಣಾ ಆರೋಯಗ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ನಗರದ ಚುನಾವಣಾ ಆಯೋಗದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಬಹಿರಂಗ ಪ್ರಚಾರವು ಇಂದು 6ಗಂಟೆಗೆ ಮುಕ್ತಾಯವಾಗಿದೆ. ರಾಜ್ಯದೆಲ್ಲೆಡೆ ಅಕ್ರಮಗಳ ತಡೆಗೆ ಎಲ್ಲೆಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಯಾವುದೇ ಕಾರಣಕ್ಕೂ ಅಹಿತಕರ ಘಟನೆ ನಡೆಯದಂತೆ ತಡೆಯಲು ಪೊಲೀಸ್ ಇಲಾಖೆ ಸಜ್ಜಾಗಿದೆ. ಮೇ 12ರಂದು ನಡೆಯುವ ಮತದಾನದಂದು ಎಲ್ಲರೂ ಕಡ್ಡಾಯವಾಗಿ ಮತಹಾಕುವಂತೆ ಮನವಿ ಮಾಡಿದರು.

ಇನ್ನೂ ಹೊರ ರಾಜ್ಯಗಳಿಂದ ಬಂದ ರಾಜಕೀಯ ನಾಯಕರು ಕ್ಷೇತ್ರ ಬಿಟ್ಟು ಹೋಗಬೇಕು. ಕೊನೆಯ 48 ಗಂಟೆಯಲ್ಲಿ ಟಿವಿಯಲ್ಲಿ ಚರ್ಚೆ ಮಾಡುವಂತಿಲ್ಲ. ಎಲ್ಲಿಯೂ ಇಬ್ಬರಿಗಿಂತ ಹೆಚ್ಚು ಜನ ಗುಂಪು ಸೇರುವಂತಿಲ್ಲ. ಸಂಜೆ 6 ಗಂಟೆ ಬಳಿಕ ಮದ್ಯ ಮಾರಾಟ ಮಾಡುವಂತಿಲ್ಲ. ಮತದಾರರಲ್ಲದವರು ಕ್ಷೇತ್ರ ಬಿಟ್ಟು ತೆರಳಬೇಕು. ಯಾವುದೇ ರೀತಿಯ ಲೌಡ್ ಸ್ಪೀಕರ್‌ಗಳನ್ನು ಬಳಸುವಂತಿಲ್ಲ. ಆರೋಗ್ಯ ಸಮಸ್ಯೆ ಇದ್ದರೆ ಮಾತ್ರ ರಾಜಕೀಯ ನಾಯಕರು ಕ್ಷೇತ್ರದಲ್ಲಿರಬಹುದು. ಕೊನೆಯ 48 ಗಂಟೆಗಳಲ್ಲಿ ಎಕ್ಸಿಟ್ ಪೋಲ್ ತೋರಿಸುವಂತಿಲ್ಲ ಎಂದು ಖಡಕ್ ಆದೇಶಿಸಿದರು.

ಈ ಕೆಲವು ದಾಖಲೆಗಳಿದ್ದರೇ ಮತ ಚಲಾಯಿಸಬಹುದು

ಅಂದಹಾಗೇ ಮತದಾನ ಮುಖ್ಯವಾದದ್ದು. ಎಲ್ಲರೂ ಮತದಾನದ ದಿನ ಮತಗಟ್ಟೆಗೆ ತೆರಳಿ ಮತ ಹಾಕಬಹುದು. ನೀವು ಹಾಕುವ ಮತ, ರಾಜ್ಯದ ಅಭಿವೃದ್ದಿಗೆ ಪೂರಕವಾಗಲಿದೆ. ಹೀಗಾಗಿ ನಿಮ್ಮ ಬಳಿ ವೋಟರ್ ಐಡಿ ಕಾರ್ಡ್ ಇಲ್ಲವೆಂದರೂ, 12 ಅಧಿಕೃತ ದಾಖಲೆಗಳಿದ್ದರೇ, ಮತದಾನ ಮಾಡಬಹುದೆಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ. ಆ ದಾಖಲೆಗಳು ಈ ಕೆಳಗಿನಂತಿವೆ...

  • ವೋಟರ್ ಐಡಿ
  • ಪಾಸ್ ಪೋರ್ಟ್
  • ಡ್ರೈವಿಂಗ್ ಲೈಸೆನ್ಸ್
  • ಆಧಾರ್ ಕಾರ್ಡ್
  • ವಿದ್ಯಾರ್ಥಿಗಳ ವ್ಯಾಸಂಗದ ಐಡಿ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್
  • ರೇಷನ್ ಕಾರ್ಡ್
  • ಪ್ಯಾನ್ ಕಾರ್ಡ್

ಸೇರಿದಂತೆ ಇನ್ನೂ ಇತರೆ ಅಧಿಕೃತ ದಾಖಲೆಗಳನ್ನು ತೋರಿಸಿ, ನೀವು ಮತ ಚಲಾಯಿಸಬಹುದಾಗಿದೆ. ಸೋ ಮೇ 12ರಂದು ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಯ ಮತದಾನದಂತೆ ನಿಮ್ಮ ಅಮೂಲ್ಯ ಮತವನ್ನು ಚಲಾಯಿಸೋದು ಮರೆಯಬೇಡಿ.

Next Story

RELATED STORIES