Top

ನಾನು ಹೆಚ್ಚು ದಿನ ಬದುಕುವುದಿಲ್ಲ, ಗೆಲ್ಲಿಸಿ ನನ್ನನ್ನು ಬದುಕಿಸಿ!

ನಾನು ಹೆಚ್ಚು ದಿನ ಬದುಕುವುದಿಲ್ಲ. ಈ ಬಾರಿ ಜನರು ನನಗೆ ಮತ ಹಾಕಿ ಗೆಲ್ಲಿಸುವ ಮೂಲಕ ಬದುಕಿಸಿಕೊಳ್ಳಿ ಎಂದು ಜೆಡಿಎಸ್​ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಭಾವಾನಾತ್ಮಕ ಹೇಳಿಕೆ ನೀಡುವ ಮೂಲಕ ಮತದಾರರನ್ನು ಸೆಳೆಯಲು ಯತ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಲಗ್ಗೆರೆಯಲ್ಲಿ ಗುರುವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ನಿಮ್ಮ ಕುಮಾರಣ್ಣ ಇನ್ನು ಹೆಚ್ಚು ದಿನ ಬದುಕುವುದಿಲ್ಲ. ಇನ್ನೊಂದು 20 ವರ್ಷ ಬದುಕಬೇಕಾದರೆ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ, ಆ ಮೂಲಕ ನನ್ನನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ಅನಾರೋಗ್ಯ ಇದ್ದರೂ ನಾನು ಜನಪರ ಸರ್ಕಾರ ಬರಬೇಕೆಂದು ಹೋರಾಟ ಮಾಡುತ್ತಿದ್ದೇನೆ.113 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ತರಬೇಕು ಎಂದರು.

'ಅಭ್ಯರ್ಥಿಗಳು ದುಡ್ಡು ದುಡ್ಡು ಎಂದು ಬಂದು ಕುಳಿತಿದ್ದಾರೆ. ನಾನು ಎಲ್ಲಿಂದ ದುಡ್ಡು ತರಲಿ, ಚಂದಾ ಎತ್ತಿ ಅಭ್ಯರ್ಥಿಗಳ ಹಣ ನೀಡುತ್ತಿದ್ದೇನೆ. ನಾನು ಇಲ್ಲಿ ಸಾಯ್ತಾ ಇದ್ದೀನಿ ಎಂದರು.

ನಿನ್ನೆ ಅಭಿಮಾನಿಗಳು ಪಟಾಕಿ ಹೊಡೆದಿದ್ದರಿಂದ ಅಸ್ವಸ್ಥಗೊಂಡಿದ್ದ ಕುಮಾರಸ್ವಾಮಿ ಅಂತಿಮ ದಿನ ಪ್ರಚಾರಕ್ಕೆ ಇಳಿಯಲಿಲ್ಲ.

Next Story

RELATED STORIES