Top

ಜೆಡಿಎಸ್ ರ್ಯಾಲಿಗೆ ಬಂದ ಬೈಕ್ ಸವಾರರಿಗೆ ಉಚಿತ ಪೆಟ್ರೋಲ್

ನೆಲಮಂಗಲ : ಬಹಿರಂಗ ಪ್ರಚಾರಕ್ಕೆ ಇಂದು ತೆರೆ ಬೀಳುವ ಹಿನ್ನಲೆಯಲ್ಲಿ ಕೊನೆಯ ಪ್ರಚಾರದ ಕಸರತ್ತಾಗಿ ಜೆಡಿಎಸ್ ಪಕ್ಷ ಬೈಕ್ ರ್ಯಾಲಿ ಆಯೋಜಿಸಿತ್ತು. ಈ ಬೈಕ್ ರ್ಯಾಲಿಗೆ ಬಂದ ನೂರಾರು ಕಾರ್ಯಕರ್ತರಿಗೆ ಭರ್ಜರಿ ಪೆಟ್ರೋಲ್ ಭಾಗ್ಯ ನೀಡಿಲಾಗಿದೆ.

ಇಂದು ಬೆಂಗಳೂರು ಹೊರವಲಯದ ನೆಲಮಂಗಲ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಕೆ.ಶ್ರೀನಿವಾಸಮೂರ್ತಿ, ಪರ ಭರ್ಜರಿ ರ್ಯಾಲಿ ಏರ್ಪಡಿಸಲಾಗಿತ್ತು. ಈ ಸಮಾವೇಶದ ಬೈಕ್ ರ್ಯಾಲಿಗೆ ಆಗಮಿಸಿದ ಪ್ರತಿಯೊಬ್ಬರಿಗೂ 500 ರೂ ಟೋಕನ್ ನೀಡಲಾಗಿತ್ತಂತೆ. ಈ ಮೂಲಕ ಕಾರ್ಯಕರ್ತರನ್ನ ಚುನವಣಾ ಪ್ರಚಾರಕ್ಕೆ ಮುಂದಾಗುವಂತೆ ತಿಳಿಸಿ ಪಕ್ಷವನ್ನು ಮುಜುಗರಕ್ಕೆ ಒಳಗಾಗುವಂತೆ ಮಾಡಿದ್ದಾರೆ. ನೆಲಮಂಗಲದ ಅರಿಶಿನಕುಂಟೆ ಬಳಿ ಇರುವ ಹೆಚ್.ಪಿ.ಪೆಟ್ರೋಲ್ ಬಂಕ್ ನಲ್ಲಿ ಸರದಿ ಸಾಲಿನಲ್ಲಿ ನಿಂತ ಬೈಕ್ ಸವಾರರು ನಾ ಮುಂದು ತಾ ಮುಂದು ಎಂಬಂತೆ ಬೈಕ್ ಗಳಿಗೆ ಪೆಟ್ರೋಲ್ ತುಂಬಿಸಿಕೊಂಡಿದ್ದಾರೆ.

ಇದೀಗ ಈ ಸುದ್ದಿ, ಎಲ್ಲೆಡೆ ಹರಿದಾಡುತ್ತಿತ್ತು. ಈ ಬಗ್ಗೆ ಸಂಬಂಧಪಟ್ಟ ಚುನಾವಣಾ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Next Story

RELATED STORIES