Top

ಕೈ ಕೋಟೆ ಕೆಡವಲು ಬಿಜೆಪಿ ಷಡ್ಯಂತ್ರ : ಮುನಿರತ್ನ

ಇತ್ತೀಚೆಗೆ ಪತ್ತೆಯಾದ ಅಸಲಿ ವೋಟರ್ ಐಡಿ ಕಾರ್ಡ್ ಪತ್ತೆ ಪ್ರಕರಣದಲ್ಲಿ ನಾನಾಗಲಿ ಅಥವಾ ಕಾಂಗ್ರೆಸ್ ಪಕ್ಷದ್ದಾಗಲಿ ಕೈವಾಡ ಇಲ್ಲ ಎಂದು ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಪಾರ್ಟ್​ಮೆಂಟ್​ನಲ್ಲಿ ಪತ್ತೆಯಾದ 9 ಸಾವಿರ ಐಡಿ ಕಾರ್ಡ್​ಗಳ ಪೈಕಿ 5 ಸಾವಿರ ಅಲ್ಪ ಸಂಖ್ಯಾತರದ್ದು, ಉಳಿದ 2 ಸಾವಿರ ದಲಿತರಾಗಿದೆ ಎಂದರು.

ವೋಟರ್ ಐಡಿ ಹತ್ತಿರ ಪತ್ತೆಯಾದ ಮತಪತ್ರ ಕೂಡ ನನ್ನದಲ್ಲ. ನಾನು ಮುದ್ರಿಸಿದ ಮಾದರಿಯ ಮತಪತ್ರಗಳು ಬೇರೆ. ಅವು ಬೇರೆಯಾಗಿವೆ. ವಶಪಡಿಸಿಕೊಂಡಿರುವ ಎಲ್ಲಾ ಐಡಿಗಳು ಕಾಂಗ್ರೆಸ್ ಮತಗಳಿರುವ ಪ್ರದೇಶಗಳದ್ದಾಗಿದೆ. ಅಲ್ಲದೇ ವೋಟರ್ ಐಡಿ ಇದ್ದ ರೂಮಿನ ಚಿತ್ರೀಕರಣ ಮಾಡರುವುದು ಕೂಡ ಬಿಜೆಪಿಯವರೇ. ಇಲ್ಲಿ ಕಾಂಗ್ರೆಸ್​ ಅಭ್ಯರ್ಥಿಯೇ ಗೆಲ್ಲುತ್ತಾ ಬಂದಿದ್ದಾರೆ. ಹಾಗಾಗಿ ನನ್ನನ್ನು ಸೋಲಿಸಲು ಬಿಜೆಪಿ ನಡೆಸಿದ ಷಡ್ಯಂತ್ರ ಇದಾಗಿದೆ ಎಂದು ಮುನಿರತ್ನ ಆರೋಪಿಸಿದ್ದಾರೆ.

ಮಂಜಳ ನಂಜಮುರಿ ಅವರು ಬಿಜೆಪಿಯ ಕಾರ್ಯಕರ್ತರಾಗಿದ್ದಾರೆ. ಕೊಠಡಿಯಲ್ಲಿ ನಾಲ್ಕೈದು ಜನರು ಇದ್ದರೂ ನಮ್ಮ ಜೊತೆ ಓಡಾಡಿಕೊಂಡಿದ್ದ ಹುಡುಗನನ್ನು ಥಳಿಸಲಾಗಿದೆ ಎಂದು ಮುನಿರತ್ನ ಆರೋಪಿಸಿದರು.

Next Story

RELATED STORIES