Top

ಕಾಂಗ್ರೆಸ್ ಪಕ್ಷ ಕಳಂಕಿತರಿಗೆ ಟಿಕೇಟ್ ನೀಡಿದೆ: ಮೋದಿ

ಬೀದರ್: ರಾಜ್ಯ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ರಾಜ್ಯ ಕಾಂಗ್ರೇಸ್ ಸರ್ಕಾರದ ವಿರುದ್ಧ ಹರಿಹಾಯ್ದರು.. ನಗರದ ನೆಹರು ಕ್ರೀಡಾಂಗಣದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ನರೇಂದ್ರ ಮೋದಿ ಕಳೆದ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದಾಗ ಇದ್ದ ಜನಸಾಗರಕ್ಕಿಂತಲೂ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದಾಗ ಸೇರಿದ್ದ ಜನಸಾಗರ ಕಂಡು ದಂಗಾದರು..

ಕರ್ನಾಟಕದ ಮುಕುಟ ಎಂದು ಕನ್ನಡಲ್ಲೇ ಭಾಷಣ ಆರಂಭಿಸಿದ ಪ್ರಧಾನಿ ನರೇಂದ್ರಮೋದಿ ಬಸವಕಲ್ಯಾಣ ತಾಲೂಕಿ‌ನ ಗೋರ್ಟಾಗ್ರಾಮದಲ್ಲಿ ನಡೆದಿದ್ದ ಹತ್ಯಾಕಾಂಡ ಬಗ್ಗೆ ಸ್ಮರಣೆ‌ಮಾಡಿಕೊಂಡರು.. ಆರಂಭದಲ್ಲಿ ಗೋರ್ಟಾ ಗ್ರಾಮದಲ್ಲಿ ಹುತಾತ್ಮರ ಸ್ಮಾರಕ ನಿರ್ಮಾಣಕ್ಕೆ ನಮ್ಮ ಬಿಜೆಪಿ ಯುವ ಮೋರ್ಛಾ ಕೈ ಹಾಕಿದ್ದು, ಹುತಾತ್ಮರ ಸ್ಮಾರಕ ನಿರ್ಮಾಣ ಮಾಡಿದ್ದಾರೆ ಎಂದು ಹೇಳಿದರು.. ಇನ್ನು ಭಾಲ್ಕಿ ತಾಲೂಕಿನ ಕೋಸಂ ಗ್ರಾಮದ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಪ್ರಕರಣವನ್ನು ನೆನಪಿಸಿಕೊಂಡು, ಅತ್ಯಾಚಾರಿಗಳಿಗೆ ನಾನು ಯಾವ ಕಾರಣಕ್ಕೂ ಬಿಡೋದಿಲ್ಲಾ ಎಂದು ಖಡಕ್ ಆಗಿ ಎಚ್ಚರಿಸಿದರು.. ಅತ್ಯಾಚಾರ ಖಂಡಿಸಿ ಪ್ರತಿಭಟನೆ ಮಾಡುತ್ತಿದ್ದಾಗ ಪೊಲೀಸರು ಲಾಠಿ ಚಾರ್ಜ್ ಮಾಡಿದರು.. ಇಂತಹ ಸರ್ಕಾರ ನಮಗೆ ಬೇಕಾ ಎಂದು ನೆರೆದಿದ್ದವರಲ್ಲಿ ಪ್ರಶ್ನಿಸಿದರು..

ಇನ್ನು ಭ್ರಷ್ಟಾಚಾರ ಹಾಗೂ ರೈತ ವಿರೋಧಿಗಳಿಗೆ ಕಾಂಗ್ರೇಸ್ ಚುನಾವಣಾ ಕಣಕ್ಕೆ ಇಳಿಸಿದೆ. ಕಳಂಕಿತರಿಗೆ ಕಣಕ್ಕಿಳಿಸಿದ ಸಿದ್ದರಾಮಯ್ಯ ಅವರು ಸೀದಾ ರೂಪಯ್ಯ ಅಲ್ಲದೆ ಮತ್ತೇನೆ? ಎಂದು ಪರೋಕ್ಷವಾಗಿ ನೈಸ್ ಸಂಸ್ಥೆ ಅದ್ಯಕ್ಷ ಅಶೋಕ್ ಖೇಣಿ ವಿರುದ್ದ ಹರಿಹಾಯ್ದರು.. ಇನ್ನು‌ಕಾಂಗ್ರೇಸ್ ನವರಿಗೆ ಮಾಡೋಕೆ ಕೆಲಸ ಇಲ್ಲಾ ಚುನಾವಣೆ ಮುಗಿದ ಮೇಲೆ ಕಾಂಗ್ರೆಸ್ ಕೈಲಾಸ ಸರೋವರ ಯಾತ್ರೆ‌ ಮಾಡುತ್ತೆ ಅಂತಾ ವ್ಯಂಗ್ಯ ವಾಡಿದ್ರು.

ನಾನೆಲ್ಲಿ ಹೋದ್ರೂ ಜನ ಮೋದಿ ಮೋದಿ ಎನ್ನುತ್ತಿದ್ದಾರೆ. ಇದು ನನಗೆ ಆಶ್ಚರ್ಯವಾಗ್ತಿದೆ. ಕಾಂಗ್ರೆಸ್ ಅವರು ಎಲ್ಲೂ ಹೋಗ್ತಿಲ್ವಾ ಎಂದು ಅಲ್ಲಿ ನೆರದಿದ್ದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಪ್ರಶ್ನೆ ಹಾಕಿದ್ರು..ಪ್ರಧಾನಿ ನರೆಂದ್ರ ಮೋದಿ ಏನು ಮಾಡಿದ್ರು ಅಂತಾ ಕಂಡ ಕಂಡಲ್ಲೆಲ್ಲಾ ಮಾತನಾಡುತ್ತಿರಲ್ಲಾ, ಮೊದಲು ನೀವು ಏನು ಮಾಡಿದ್ದೀರಾ ಹೇಳಿ. 2019 ರ ಲೋಕಸಭಾ ಚುನಾವಣೆ ಹೊತ್ತಿಗೆ ನಾನು ಎಲ್ಲವನ್ನು ತೋರಿಸುತ್ತೇನೆ ಎಂದು ಕಾಂಗ್ರೆಸ್ ನವರಿಗೆ ಸವಾಲು ಹಾಕಿದರು...

Next Story

RELATED STORIES