Top

ಕಾಂಗ್ರೆಸ್ ಕಾರ್ಯಕರ್ತರಿಂದ ಹಲ್ಲೆ ನಡೆಸಿ ಕೊಲೆ ಯತ್ನ : ಬಿಜೆಪಿ ಅಭ್ಯರ್ಥಿ ಸುಭಾಷ್ ಕಲ್ಲೂರ್ ಆರೋಪ

ಕಾಂಗ್ರೆಸ್ ಕಾರ್ಯಕರ್ತರಿಂದ ಹಲ್ಲೆ ನಡೆಸಿ ಕೊಲೆ ಯತ್ನ : ಬಿಜೆಪಿ ಅಭ್ಯರ್ಥಿ ಸುಭಾಷ್ ಕಲ್ಲೂರ್ ಆರೋಪ
X

ಬೀದರ್ : ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೇನು ದಿನಗಣನೆ ಆರಂಭವಾಗಿದೆ. ಈ ಹೊತ್ತಿನಲ್ಲಿ, ಕಾಂಗ್ರೇಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ಮದ್ಯ ನಡೆದ ಕೊಲೆ ಆರೋಪ ಕೇಳಿಬಂದಿದೆ. ಹುಮನಾಬಾದ್ ತಾಲೂಕಿನ ದುಬಲಗುಂಡಿಯಲ್ಲಿ ಹುಮನಾಬಾದ ಬಿಜೆಪಿ ಅಭ್ಯರ್ಥಿ ಸುಭಾಷ ಕಲ್ಲೂರ ಮೆಲೆ ಕಾಂಗ್ರೆಸ್ ಕಾರ್ಯಕರ್ತರಿಂದ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಸುಭಾಷ್ ಕಲ್ಲೂರ್ ಆರೋಪಿಸಿದ್ದಾರೆ.

ದುಬಲಗುಂಡಿ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತದಾರರಿಗೆ ಹಣ ಹಂಚುತ್ತಿದ್ದರು ಎಂದು ಕಾಂಗ್ರೇಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಇದೇ ವೇಳೆ ಕಾಂಗ್ರೇಸ್ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರ ರ ನಡುವೆ ಕಲ್ಲು ತೂರಾಟ ನಡೆದಿದೆ. ಇನ್ನು ಘಟನೆಯಲ್ಲಿ ಇಬ್ಬರು ಕಾರ್ಯಕರ್ತರ ಕಾರುಗಳು ಜಖಂಗೊಂಡಿವೆ. ಸುಭಾಷ್ ಕಲ್ಲೂರ್ ಕಾರಿನ ಮೆಲೆ ಕಲ್ಲು ಹಾಕಿ ಕೊಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿ ಸುಭಾಷ್ ಕಲ್ಲೂರ್ ಹಳ್ಳಿಖೇಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇತ್ತ ಕಾಂಗ್ರೇಸ್ ಅಭ್ಯರ್ಥಿ ರಾಜಶೇಖರ ಪಾಟೀಲ್ ಸಹೋದರ ಮೇಲೆಹಲ್ಲೆ ಮಾಡಿದ್ದಾರೆ ಎಂದು ಹಳ್ಳಿಖೇಡ ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು ದಾಖಲಿಸಿದ್ದಾರೆ.. ರಾಜಶೇಖರ್ ಪಾಟೀಲ್ ತಮ್ಮ ಮೇಲಿನ ಅರೋಪವನ್ನು ತಳ್ಳಿ ಹಾಕಿದ್ದು, ದುಬಲಗುಂಡಿಗೆ ಮೊದಲು ನಾನು ಹೋಗಿದ್ನಾ ಇಲ್ಲಾ ಅವರು ಹೋಗಿದ್ರಾ ಎಂದು ಪ್ರಶ್ನೆ ಹಾಕಿದ್ರು. ನಮ್ಮ ಕಾರ್ಯಕರ್ತರು ಅವರಮೇಲೆ ಹಲ್ಲೆ ಮಾಡಿದ್ದು ನಿಜಾನೇ ಆಗಿದ್ರೆ ನಾನು ರಾಜಕೀಯದಿಂದ ಇವತ್ತೆ ದೂರ ಉಳಿಯುವೆ. ಅವರಿಗೆ ತಾಕತ್ತಿದ್ದರೆ ತನಿಖೆಗೆ ಬರಲಿ ಮತ್ತೊಮ್ಮೆ ದುಬಲಗುಂಡಿಗೆ ಹೋಗೋಣ, ಮೊದಲು ಅವರೆ ಬಂದಿದ್ದು ಅಂತಾ ನಿಜವಾದ್ರೆ ರಾಜಕೀಯದಿಂದ ದೂರ ಉಳಿಯುತ್ತಾರಾ ಎಂದು ರಾಜಶೇಖರ್ ಪಾಟೀಲ್ ಸಾವಾಲು ಹಾಕಿದ್ದಾರೆ.

Next Story

RELATED STORIES