Top

ಕಾಂಗ್ರೆಸ್ ಆಭ್ಯರ್ಥಿ ಡಾ.ಯೋಗೀಶ್ ಬಾಬು ಭರ್ಜರಿ ಮತಬೇಟೆ

ಚಿತ್ರದುರ್ಗ : ಚುನಾವಣೆ ಪ್ರಚಾರ ಅಂತಿ ಘಟ್ಟ ತಲುಪಿದ್ದು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಆಭ್ಯರ್ಥಿ ಡಾ ಯೋಗೀಶ್ ಬಾಬು ಶ್ರೀರಾಮುಲು ಎದುರು ಈ ಬಾರಿ ಗೆಲುವು ಸಾಧಿಸಲು ಪಣತೊಟ್ಟಿದ್ದಾರೆ.

ಹಗಲುರಾತ್ರಿ ಎನ್ನದೆ ತನ್ನ ಕಾರ್ಯಕರ್ತ ಬೆಂಬಲಿಗರ ಜೊತೆ ಭರ್ಜರಿ ಮತಬೇಟೆ ಮಾಡುತ್ತಿದ್ದಾರೆ. ಹೋದಕಡೆಯೆಲ್ಲ ಭರ್ಜರಿ ರೆಸ್ಪಾನ್ಸ್ ದೊರಕಿದ್ದು, ಯುವನಾಕಯ ಮತ್ತು ಸ್ಥಳಿಯ ಆಭ್ಯರ್ಥಿ ಎನ್ನುವುದು ಡಾ ಯೋಗೀಶ್ ಬಾಬು ಪ್ಲೆಸ್ ಪಾಯಿಂಟ್ ಆಗಿದೆ. ಇಂದು ಲಾಸ್ಟ್ ದಿನದ ಪ್ರಚಾರವಾಗಿರುವುದರಿಂದ ಕೆಲವು ಹಳ್ಳಿಗಳು ಬಾಕಿ ಇದ್ದು ಅವುಗಳನ್ನು ಸಂಜೆಯೊಳಗೆ ಮುಗಿಸುವುದಾಗಿ ಹೇಳಿದ ಯೋಗೀಶ್ ಬಾಬು, ಈ ಬಾರಿ ಕಾಂಗ್ರೆಸ್ ಗೆಲುವು ಖಚಿತ ಎಂದರು.

ಇನ್ನೂ ಯೋಗೀಶ್ ಬಾಬು ಅವರನ್ನು ಗೆಲ್ಲಿಸಲು ಯುವ ಸಮೂಹವೇ ಟೊಂಕ ಕಟ್ಟಿ ನಿಂತಿದೆ. ಯಾರು ಸೋಲು ಯಾರ ಗೆಲುವು ಎನ್ನುವುದು ಇ್ನನೂ ಕೆಲವೇ ದಿನಗಳಲ್ಲಿ ಹೊರಬೀಳಲಿದ್ದು, ಎಲ್ಲಾ ಆಬ್ಯರ್ಥಿಗಳು 12ರಂದು ಕಡ್ಡಾಯ ಮತಾದಾನ ಮಾಡಿ ಕಾಂಗ್ರೆಸ್ ಪಕ್ಷ ಬೆಂಬಲಿಸುವಂತೆ ಮನವಿ ಮಾಡಿದರು.

Next Story

RELATED STORIES