Top

ಹೆಣ್ಣುಮಕ್ಕಳ ಪರ ಧ್ವನಿಯೆತ್ತಿದ ಅಪ್ಪು

ಹೆಣ್ಣುಮಕ್ಕಳ ಪರ ಧ್ವನಿಯೆತ್ತಿದ ಅಪ್ಪು
X

ಹೆಣ್ಣು ಮಕ್ಕಳ ಕಳ್ಳಸಾಗಣೆ ಮತ್ತದರ ತಡೆಯ ಕುರಿತಾದ ಸಾಕ್ಷ್ಯಚಿತ್ರ ಅಮೋಲಿ. ನಾಲ್ಕೈದು ಭಾಷೆಯಲ್ಲಿ ತಯಾರಾಗಿರೋ ಈ ಡಾಕ್ಯುಮೆಂಟ್ರಿಯನ್ನ ಕನ್ನಡದಲ್ಲಿ ಪುನೀತ್ ನಿರೂಪಣೆ ಮಾಡಿದ್ದಾರೆ. ಅಷ್ಟೇ ಅಲ್ಲ, ಸಾಮಾಜಿಕ ಕಳಕಳಿ ಇರೋ ಸಾಕ್ಷ್ಯಚಿತ್ರ ಅನ್ನೋ ಉದ್ದೇಶದಿಂದ ಖುದ್ದು ಅವರೇ ತಮ್ಮ ಹೋಮ್ ಬ್ಯಾನರ್ ಪಿಆರ್​ಕೆ ಪ್ರೊಡಕ್ಷನ್ಸ್​ನಡಿ ರಿಲೀಸ್ ಮಾಡಿದ್ದಾರೆ. ಆ ಮೂಲಕ ಅಭಿಮಾನಿಗಳ ಪಾಲಿನ ಪವರ್ ಸ್ಟಾರ್ ಪುನೀತ್ ಈಗ ನಿಜ ಜೀವನದಲ್ಲೂ ರಿಯಲ್ ಹೀರೋ ಅನಿಸಿಕೊಂಡಿದ್ದಾರೆ.

8 ವರ್ಷದ ಹಿಂದೆ ಪುನೀತ್ ಅಭಿನಯದ ಜಾಕಿ ಸಿನಿಮಾದಲ್ಲಿ ಹೆಣ್ಣು ಮಕ್ಕಳ ಕಿಡ್ನ್ಯಾಪ್, ಅವ್ರನ್ನ ದಂಧೆಗೆ ಬಳಸೋ ಪರಿಯನ್ನ ತೋರಿಸಲಾಗಿತ್ತು. ಸಿನಿಮಾ ನೋಡಿದವ್ರಿಗೆ ಹೆಣ್ಣು ಮಕ್ಕಳ ದಂಧೆಯ ಕುರಿತಾದ ಜಾಲ ವಾಸ್ತವಕ್ಕೆ ಕೊಂಚ ದೂರ ಅನಿಸಿದ್ರೂ, ಸಿನಿಮಾನ ಸಿನಿಮಾ ರೀತಿಯಲ್ಲಿ ಅಕ್ಸೆಪ್ಟ್ ಮಾಡಿದ್ರು. ಸಿನಿಮಾದ ಕ್ಲೈಮ್ಯಾಕ್ಸ್​ನಲ್ಲಿ ಹೆಣ್ಣು ಮಕ್ಕಳನ್ನ ಕಾಪಾಡಿದಂತೆ ಪುನೀತ್ ಇದೀಗ ನಿಜ ಜೀವನದಲ್ಲೂ ಹೆಣ್ಣು ಮಕ್ಕಳ ಕಳ್ಳ ಸಾಗಣೆ ತಡೆಗೆ ಕೈ ಜೋಡಿಸಿದ್ದಾರೆ.

ಅಮೋಲಿ ಜೊತೆ ಈ ಡಾಕ್ಯುಮೆಂಟ್ರಿಯಲ್ಲಿ ಒಂದಷ್ಟು ಮಂದಿ ಹೆಣ್ಣು ಮಕ್ಕಳ ಕಣ್ಮರೆ, ಅವ್ರನ್ನ ದಂಧೆಗೆ ಬಳಸಿಕೊಂಡ ಪರಿ, ನಲಿವೇ ಇಲ್ಲದ ಅವರ ನೋವಿನ ಕಥೆಯನ್ನ ಎಥಾವತ್ತಾಗಿ ತೋರಿಸಲಾಗಿದೆ. ಅದ್ರಲ್ಲೂ ಅವ್ರ ಮಾರಾಟ ಜಾಲವನ್ನ ತುಂಬಾ ಎಳೆ ಎಳೆಯಾಗಿ ಬಿಚ್ಚಿಡಲಾಗಿದ್ದು, ಹೆಣ್ಣು ಮಗು ಇರೋ ಪ್ರತಿಯೊಬ್ಬ ತಂದೆ-ತಾಯಿಗೆ ಇದೊಂದು ಎಚ್ಚರಿಕೆ ಗಂಟೆಯಾಗಿದೆ.ತಮ್ಮ ಸಿನಿಮಾಗಳ ಬ್ಯುಸಿ ಶೆಡ್ಯೂಲ್​ನ ನಡುವೆಯೂ ಅಪ್ಪು, ಇದಕ್ಕೆ ಬಿಡುವು ಮಾಡಿಕೊಂಡು ವಾಯ್ಸ್ ಕೊಟ್ಟಿದ್ದಾರೆ.

ಎಲ್ಲೋ ಒಂದು ಕಡೆ, ಜಾಕಿ ಚಿತ್ರದಲ್ಲಿ ಪುನೀತ್ ರಾಜ್​ಕುಮಾರ್ ಮಾಡೋ ರೀಲ್ ಸಾಹಸ ಇಲ್ಲಿ ರಿಯಲ್ ಆದಂತೆ ಅನಿಸುತ್ತೆ. ಹೌದು, ಜನರಲ್ಲಿ ಜಾಗೃತಿ ಮೂಡಿಸೋ ನಿಟ್ಟಿನಲ್ಲಿ ಒಬ್ಬ ಸ್ಟಾರ್ ನಟ ಈ ರೀತಿಯ ಸಾಮಾಜಿಕ ಕೆಲಸಗಳಿಗೆ ಕೈಜೋಡಿಸಿರೋದು ನಿಜಕ್ಕೂ ಹೆಮ್ಮೆಯ ವಿಚಾರವೇ ಸರಿ.

Next Story

RELATED STORIES