Top

ಹಾವೇರಿಯಲ್ಲಿ ಯೋಗಿ ಆದಿತ್ಯನಾಥ್ ಅಬ್ಬರದ ಪ್ರಚಾರ

ಹಾವೇರಿ: ಇಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಹಾವೇರಿ ಜಿಲ್ಲೆಗೆ ಆಗಮಿಸಿ, ಜಿಲ್ಲೆಯ ಹೀರೆಕೆರೂರು ವಿಧಾಸಭಾ ಕ್ಷೇತ್ರದ ಬಿಜೆಪಿ ಆಭ್ಯರ್ಥಿ ಯುಬಿ ಬಣಕಾರ್ ಪರ ಪ್ರಚಾರ ನಡೆಸಿದರು.

ಹೀರೆಕೆರೂರು ಪಕ್ಷೇತ್ರ ರಟ್ಟೀಹಳ್ಳಿ ಗ್ರಾಮದಲ್ಲಿ ಆಯೋಜಿಸಿದ ಸಭೆಯಲ್ಲಿ ಮಾತನಾಡಿದ ಅವರು ಉತ್ತರ ಪ್ರದೇಶ ಶ್ರೀರಾಮನ ಜನ್ಮಭೂಮಿ. ಶ್ರೀರಾಮನ ಬಲಗೈ ಬಂಟ ಹನುಮಾನ ಹುಟ್ಟಿದ್ದು ಇದೇ ನೆಲದಿಂದ. ರಾಮರಾಜ್ಯವನ್ನ ನಾವು ಕಟ್ಟೋಣ. ನಾನು ಕರ್ನಾಟಕ ರಾಜ್ಯಕ್ಕೆ ಬಂದಾಗಿಂದ ಸಿಎಂ ಸಿದ್ದರಾಮಯ್ಯಗೆ ನಡುಕ ಶುರುವಾಗಿದೆ ಎಂದರು.

ಇನ್ನೂ ನಾನೊಬ್ಬ ರಾಷ್ಟ್ರೀಯವಾದಿ. ಹೀಗಾಗಿ ಆತಂಕ ಶುರುವಾಗಿದೆ. ಯುಪಿ ಸರಕಾರ ರೈತರ ಸಾಲಮನ್ನಾ ಮಾಡಿದೆ. ಆದ್ರೆ ರಾಜ್ಯದ ಸಿದ್ದರಾಮಯ್ಯ ಸರಕಾರ ಸಾಲಮನ್ನಾ ಮಾಡಿಲ್ಲ. ರೈತರಿಗೆ ಸಹಾಯಹಸ್ತ ಬೇಕಾಗಿದೆ. ಕೇಂದ್ರ ಅದನ್ನ ಕೊಡಲು ಬದ್ದವಾಗಿದೆ. ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನ ಕೊಟ್ಟಿದೆ. ಆದ್ರೆ ರೈತರ ಮನೆಮನೆಗೆ ಮುಟ್ಟಿಲ್ಲ. ಕಾಂಗ್ರೆಸ್ ಮತ್ತು ಭ್ರಷ್ಟಾಚಾರ ಒಂದೇ ನಾಣ್ಯದ ಎರಡು ಮುಖಗಳಾಗಿವೆ. ಜಿಹಾದಿ ಕಾಂಗ್ರೆಸ್ ನಮ್ಮವರನ್ನ ಹತ್ಯೆ ಮಾಡಿದೆ ಈ ಜಿಹಾದಿಗಳಿಗೆ ನಾವು ತಕ್ಕ ಪಾಠ ಕಲಿಸಬೇಕಿದೆ. ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

Next Story

RELATED STORIES