Top

ಸೋಲುವ ಭಯದಲ್ಲಿ ಕ್ಷೇತ್ರ ಬಿಡದ ಈಶ್ವರಪ್ಪ: ಪ್ರಸನ್ನಕುಮಾರ್

ಶಿವಮೊಗ್ಗ: ಅನ್ಯಪಕ್ಷಗಳನ್ನು ಟೀಕಿಸುವ ಶಿವಮೊಗ್ಗ ನಗರದ ಬಿಜೆಪಿ ಅಭ್ಯರ್ಥಿ ಕೆ.ಎಸ್​.ಈಶ್ವರಪ್ಪನವರು ಕ್ಷೇತ್ರವನ್ನು ಬಿಟ್ಟು ಎಲ್ಲೂ ಹೋಗುತ್ತಿಲ್ಲ ಎಂದು ವಿಧಾನ ಪರಿಷತ್​ ಸದಸ್ಯ ಆರ್.ಪ್ರಸನ್ನಕುಮಾರ್​ ಟೀಕಿಸಿದ್ದಾರೆ.

ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೆ.ಎಸ್​.ಈಶ್ವರಪ್ಪನವರು ತಮ್ಮ ಕ್ಷೇತ್ರವನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. 1989 ರಿಂದಲೂ ರಾಜಕಾರಣದಲ್ಲಿರುವ ಈಶ್ವರಪ್ಪನವರು ಪಕ್ಷದ ರಾಜ್ಯಧ್ಯಕ್ಷರಾಗಿ, ಉಪ ಮುಖ್ಯಮಂತ್ರಿಯಾಗಿ ಹಾಗೂ ಸಚಿವರಾಗಿಯೂ ಸಹ ಕಾರ್ಯನಿರ್ವಹಿಸಿದ್ದಾರೆ. ಅಂತಹ ರಾಜ್ಯ ನಾಯಕರು ಇಂದು ತಮ್ಮ ಕ್ಷೇತ್ರವನ್ನು ಬಿಟ್ಟು ಹೋಗದೇ, ತಮ್ಮ ಕ್ಷೇತ್ರದಲ್ಲೇ ಉಳಿದುಕೊಳ್ಳುತ್ತಿದ್ದಾರೆ ಇಂದು ಆಶ್ಚರ್ಯವೇ ಸರಿ ಎಂದರು..

ಇನ್ನೂ ಈಶ್ವರಪ್ಪನವರಿಗೆ ಯಡಿಯೂರಪ್ಪನವರ ಹೊಡೆತವನ್ನೇ ತಾಳಲು ಸಾಧ್ಯವಾಗುತ್ತಿಲ್ಲ. ಎಲ್ಲಿ ಬಿಜೆಪಿ ನಾಯಕರೇ ತಮ್ಮನ್ನೂ ಸೋಲಿಸುತ್ತಾರೋ ಎನ್ನುವ ಭಯದಿಂದ ಈಶ್ವರಪ್ಪನನ್ನು ಕಾಡುತ್ತಿರಬೇಕು. ಹೀಗಾಗಿ ಬೇರೆ ಅಭ್ಯರ್ಥಿಗಳ ಪರ ಪ್ರಚಾರಕ್ಕೇ ಹೋಗದೇ ಇಲ್ಲಿಯೇ ಉಳಿದುಕೊಂಡಿದ್ದಾರೆ. ಅಂತಹವರು ಬೇರೆ ಪಕ್ಷದ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ. ಜಾತಿ ಒಡೆಯುವ ಕೆಲಸವನ್ನು ಕಾಂಗ್ರೆಸ್​ ಎಂದು ಮಾಡಿಲ್ಲ. ಈಗ ಬೇರೆ ಬೇರೆ ಜಾತಿ, ಜನಾಂಗದ ನಾಯಕರುಗಳನ್ನು ಕೂರಿಸಿಕೊಂಡು ಸಭೆ ಮಾಡುತ್ತಿರುವುದು ಈಶ್ವರಪ್ಪನವರೇ ಹೊರತು ಕಾಂಗ್ರೆಸ್ಸಿಗರಲ್ಲ ಎಂದು ಪ್ರಸನ್ನಕುಮಾರ್ ಟೀಕಿಸಿದರು.

Next Story

RELATED STORIES