ಸೋನಂ ಆರತಕ್ಷತೆಯಲ್ಲಿ ಸೆಲೆಬ್ರಿಟಿಗಳ ಮಿಂಚು

X
TV5 Kannada9 May 2018 8:32 AM GMT
ಬಹುದೊಡ್ಡ ಮದುವೆ ಸಮಾರಂಭದ ನಂತರ ಬಾಲಿವುಡ್ ಬ್ಯೂಟಿ ಸೋನಮ್ ಕಪೂರ್ ಹಾಗೂ ಆನಂದ್ ಅಹುಜಾ ತಮ್ಮ ಸ್ನೇಹಿತರು, ಬಂಧುಗಳಿಗಾಗಿ ಮುಂಬೈನ ಲೀಲಾ ಹೋಟೆಲ್ನಲ್ಲಿ ನಿನ್ನೆ ರಾತ್ರಿ ಗ್ರ್ಯಾಂಡ್ ರಿಸೆಪ್ಷನ್ ಪಾರ್ಟಿ ಆಯೋಜಿಸಿದ್ರು. ಬಿಳಿ ಹಾಗೂ ಬೂದು ಬಣ್ಣದ ಚೆವ್ರೋನ್ ಶೈಲಿಯ ಲೆಹಂಗಾದಲ್ಲಿ ಸೋನಮ್ ಕಂಗೊಳಿಸಿದ್ರೆ ..ಕಪ್ಪು ಬಣ್ಣದ ಶೆರವಾನಿಯಲ್ಲಿ ಆನಂದ್ ಎಲ್ಲರ ಗಮನ ಸೆಳೆದ್ರು.
ಸೋನಂ ಕಪೂರ್ ರಿಸೆಪ್ಷನ್ ಪಾರ್ಟಿಗೆ ಬಾಲಿವುಡ್ ತಾರೆಗಳ ದಂಡೇ ಹರಿದುಬಂದಿತ್ತು.ಶಾರುಕ್ ಖಾನ್ ಹಾಗೂ ಗೌರಿ ಖಾನ್, ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ, ಕತ್ರೀನಾ ಕೈಫ್, ಅಲಿಯಾ ಭಟ್. ಕರೀನಾ, ಕರೀಷ್ಮಾ ಹಾಗೂ ಸೈಫ್ ಅಲಿ ಖಾನ್, ಶಾಹಿದ್ ಕಪೂರ್ ದಂಪತಿ, ಶತ್ರುಘ್ನ ಸಿನ್ಹಾ ದಂಪತಿ ಸೇರಿದಂತೆ ಅನೇಕ ಸ್ಟಾರ್ ನಟರು ಸೋನಂ ಆರತಕ್ಷತೆ ಸಮಾರಂಭದಲ್ಲಿ ಹಾಜರಿದ್ರು.
Next Story