Top

ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ 'ಕಾಲ' ಚಿತ್ರ ರಿಲೀಸ್‌ಗೆ ಸಂಕಷ್ಟ

ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ ಕಾಲ ಚಿತ್ರಕ್ಕೆ ಕಂಟಕ ಶುರುವಾಗಿದೆ. ಟೀಸರ್ ಸೂಪರ್ ಹಿಟ್ ಆಗಿ ಆಡಿಯೋ ರಿಲೀಸ್ ಆಗ್ತಿದ್ದಂತೆ ತಮಿಳುನಾಡಿನಲ್ಲಿ ಸಿನಿಮಾಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.

ತಮಿಳುನಾಡು ಸಚಿವ ಜಯಕುಮಾರ್ ಕಾಲ ಸಿನಿಮಾ ರಿಲೀಸ್​ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾಲ ಚಿತ್ರದ ರಜಿನಿ ಪಾತ್ರ ಕಾಲನ್​ನ ನೆನಪಿಸುತ್ತಿದೆ. ರಾಜಕೀಯ ಹಿತಾಸಕ್ತಿಗಾಗಿ ಶಾಂತಿಯನ್ನ ಕದಡುವ ಕಾರ್ಯ ನಡೆಯುತ್ತಿದೆ ಎಂದಿದ್ದಾರೆ. ಅಷ್ಟೇ ಅಲ್ಲ, ರಿಲೀಸ್ ಆಗಿರೋ ಹಾಡೊಂದರ ಸಾಹಿತ್ಯದಲ್ಲಿ ತಮಿಳುನಾಡು ಸರ್ಕಾರಕ್ಕೆ ಅವಹೇಳನ ಮಾಡಿದ್ದಾರೆ ಅಂತ ಆರೋಪಿಸಿದ್ದಾರೆ.

ಕಾಲ ಟೀಂ ಗಲಭೆ ಸೃಷ್ಟಿಸೋಕೆ ಮುಂದಾಗಿದ್ದು, ಹಾಗಾದಲ್ಲಿ ಕಾನೂನಿನಾತ್ಮಕವಾಗಿ ಕ್ರಮ ಕೈಗೊಳ್ಳಲಾಗುವುದು ಅಂತ ಸಚಿವ ಜಯಕುಮಾರ್ ಎಚ್ಚರಿಸಿದ್ದಾರೆ. ಒಟ್ಟಾರೆ ಪರೋಕ್ಷವಾಗಿ ರಜಿನಿ ರಾಜಕೀಯ ಎಂಟ್ರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.

Next Story

RELATED STORIES