Top

ಲಾಲೂಗೆ 5 ದಿನ ಪೆರೋಲ್​, ಮಗನ ಮದುವೆಗೆ ನಿತೀಶ್​ಗೂ ಆಹ್ವಾನ

ಮೇವು ಹಗರಣ ಸೇರಿದಂತೆ ನಾನಾ ಪ್ರಕರಣಗಳಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ಆರ್​ಜೆಡಿ ಪಕ್ಷದ ಮುಖಂಡ ಲಾಲೂ ಪ್ರಸಾದ್ ಯಾದವ್​ಗೆ ಪುತ್ರ ತೇಜ್​ ಪ್ರತಾಪ್​ ಯಾದವ್ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು 5 ದಿನಗಳ ಪೆರೋಲ್ ನೀಡಲಾಗಿದೆ. ವಿಶೇಷ ಅಂದರೆ ಮುಖ್ಯಮಂತ್ರಿ ನಿತೀಶ್ ಕುಮಾರ್​ಗೂ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಲಾಗಿದೆ.

ತೇಜ್​ ಪ್ರತಾಪ್ ಯಾದವ್ ವಿವಾಹ ಮೇ 12ರಂದು ಮಾಜಿ ಸಚಿವೆ ಹಾಗೂ ಆರ್​ಜೆಡಿ ಪಕ್ಷದ ನಾಯಕಿ ಚಂದ್ರಿಕಾ ರಾಯ್ ಅವರ ಪುತ್ರ ಐಶ್ವರ್ಯ ರೈ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಪ್ರಸ್ತುತ ಲಾಲೂ ಪ್ರಸಾದ್ ಯಾದವ್ ಜೈಲಿನಲ್ಲಿದ್ದು, ಭ್ರಷ್ಟಾಚಾರ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯದಿಂದ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.

Next Story

RELATED STORIES