Top

ರಾಮನಗರದಲ್ಲಿ ಘಟಾನುಘಟಿ ನಾಯಕರ ಪ್ರಚಾರ

ರಾಮನಗರ : ಜಿಲ್ಲೆಯ ಚನ್ನಪಟ್ಟಣ, ಮಾಗಡಿ ಹಾಗೂ ರಾಮನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಘಟನುಘಟಿನಗಳ ಅಂತಿಮ ಹಂತದ ಕಸರತ್ತು ನಡೆಸಿದರು. ರಾಮನಗರ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ್ರು ಪ್ರಚಾರ ನಡೆಸಿದ್ರೆ, ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಪ್ರಚಾರ ನಡೆಸಿದ್ರು. ಇತ್ತ ಬೊಂಬೆನಾಡು ಚನ್ನಪಟ್ಟಣದಲ್ಲೂ ಕೂಡ ಕಾಂಗ್ರೇಸ್ ಅಭ್ಯರ್ಥಿ ಹೆಚ್.ಎಂ.ರೇವಣ್ಣ ಬೆಳ್ಳಂ ಬೆಳ್ಳಗ್ಗೆ ರೈಲ್ವೆ ನಿಲ್ದಾಣದಲ್ಲಿ ಪ್ರಚಾರ ನಡೆಸಿದ್ರೆ, ನಗರಸಭಾ ವ್ಯಾಪ್ತಿಯಲ್ಲಿ ಬಿಜೆಪಿ ಅಭ್ಯರ್ಥಿ ರೋಡ್ ಶೋ ನಡೆಸಿದರು.

ಬೊಂಬೆ ನಾಡು ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಎಂ‌.ರೇವಣ್ಣ ಬೆಳ್ಳಂ ಬೆಳಗ್ಗೆಯೇ ಪ್ರಚಾರ ನಡೆಸಿದ್ರು, ನಗರದ ರೈಲ್ವೆ ನಿಲ್ದಾಣದಲ್ಲಿ ರೇವಣ್ಣ ಪ್ರಚಾರ ನಡೆಸಿದ ಅವರು, ಪ್ರತಿದಿನ ಈ ರೈಲುಗಳಿಗೆ ೩ ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಬೆಂಗಳೂರಿಗೆ ಹೋಗುತ್ತಾರೆ. ಈ ಹಿನ್ನಲೆಯಲ್ಲಿ ಚಾಮುಂಡಿ ಹಾಗೂ ವಿಶ್ವಮಾನವ ಎಕ್ಸ್‌ಪ್ರೆಸ್‌ ರೈಲಿಗೆ ಹೋಗುವ ಪ್ರಯಾಣಿಕರ ಮತ ಕೇಳಿದರು.

ರಾಮನಗರ ವಿಧಾನಸಭಾ ವ್ಯಾಪ್ತಿಯ ಹಾರೋಹಳ್ಳಿ ಹೋಬಳಿಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಬಿರುಸಿನ ಪ್ರಚಾರ ನಡೆಸಿದರು. ಜೆಡಿಎಸ್‌ ಅಭ್ಯರ್ಥಿ ಹೆಚ್.ಡಿ.ಕುಮಾರಸ್ವಾಮಿ ಪರ ಬಿರುಸಿನ ಪ್ರಚಾರ ನಡೆಸಿದರು. ರೋಡ್ ಶೋ ಮೂಲಕ ಮತಯಾಚನೆ ಮಾಡಿದ ದೊಡ್ಡ ಗೌಡ್ರು, ಕ್ಷೇತ್ರದ ಕುಮಾರಸ್ವಾಮಿ ಬೆಂಬಲಿಸುವಂತೆ ದೇವೇಗೌಡರ ಮನವಿ ಮಾಡಿದರು.

ಇನ್ನೂ ತೀವ್ರ ಕುತೂಹಲ ಕೆರಳಿಸುರುವ ಮಾಗಡಿ ವಿಧಾನಸಭೆ ಕ್ಷೇತ್ರದಲ್ಲಿ ಸಚಿವ ಡಿ ಕೆ ಶಿವಕುಮಾರ್ ಬಿರುಸಿನ ಪ್ರಚಾರ ನಡೆಸಿದ್ರು. ಮಾಗಡಿ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹೆಚ್ ಸಿ ಬಾಲಕೃಷ್ಣ ಪರ ಪ್ರಚಾರ ನಡೆಸಿದರು. ಬೆಂಗಳೂರು -ಮೈಸೂರು ರಸ್ತೆಯಲ್ಲಿರುವ ಹೆಜ್ಜಾಲದಿಂದ ನೂರಾರು ಕಾರ್ಯಕರ್ತರೊಟ್ಟಿಗೆ, ಬೈಕ್ ರ್ಯಾಲಿ ವೇದಿಕೆಗೆ ಬಂದ ಇಂಧನ ಸಚಿವ ಡಿ ಕೆ ಶಿವಕುಮಾರ್, ಬಿಡದಿಯ ಬಿಜಿಎಸ್ ಸರ್ಕಲ್‌ ನಲ್ಲಿ ಇರುವ ವೇದಿಕೆ ವೇದಿಕೆಯಲ್ಲಿ ಆಗಮಿಸಿದರು.

ಈ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಸಾಧನೆಯನ್ನ ನೋಡಿ ಹೆಚ್.ಸಿ. ಬಾಲಕೃಷ್ಣ ನಮ್ಮ ಪಕ್ಷಕ್ಕೆ ಬಂದಿದ್ದಾರೆ. ಮೂನ್ನೂರು ಕೋಟಿ ವೆಚ್ಚದ ಯೋಜನೆಯನ್ನ ಮಾಗಡಿಯಲ್ಲಿ ಡಿ.ಕೆ.ಸುರೇಶ್ ಹಾಗೂ ಸಚಿವ ಹೆಚ್.ಎಂ. ರೇವಣ್ಣ ಶ್ರೀರಂಗ ಏತನೀರಾವರಿ ಯೋಜನೆ ರೂಪಿಸಿದ್ದಾರೆ. ನಾನು ರಾಜ್ಯ ಪ್ರವಾಸ ಮಾಡಿದ್ದೇನೆ. ಕಾಂಗ್ರೆಸ್ ಗೆ ಉತ್ತಮ‌ ವಾತವರಣ ಇದೆ ಎಂದು ಹೇಳಿದರು.

ಒಟ್ಟಾರೆ ರಾಮನಗರ ಜಿಲ್ಲೆಯಲ್ಲಿ ಅಂತಿಮ ಹಂತದ ಕಸರತ್ತು ನಡೆದಿದೆ. ನಾಳೆಯು ಕೂಡ ಘಟನುಘಟಿ ರಾಜಕಾರಣಿಗಳು ಪ್ರಚಾರ ನಡೆಸಲಿದ್ದಾರೆ. ವಿಜಯಲಕ್ಷ್ಮಿ ಯಾರಿಗೆ ಒಲಿಯಲಿದ್ದಾಳೆ ಎಂಬುದನ್ನ ಮೇ. 15ರ ವರೆಗೆ ಕಾಯಲೇ ಬೇಕು.

Next Story

RELATED STORIES