Top

ಮೋದಿಯವರೇ 4.31 ಕೋಟಿ ಸೂಟ್‌ ಮಾಹಿತಿ ಕೊಡಿ

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಮೇಲೆ ಆದಾಯ ತೆರಿಗೆ ವಂಚನೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಉಗ್ರಪ್ಪ, ಪ್ರಧಾನಿ ನರೇಂದ್ರ ಮೋದಿಯವರಿಗೆ ಗುಜರಾತ್ ಮೂಲದ ಅನಿವಾಸಿ ಭಾರತೀಯ ಉದ್ಯಮಿ ರಮೇಶ್ ಕುಮಾರ್ ಬಿಕಾಭಾಯ್ ಎಂಬುವರು ತಮ್ಮ ಪುತ್ರನ ವಿವಾಹ ಸಂದರ್ಭದಲ್ಲಿ ಚಿನ್ನದ ಎಳೆಗಳ ಸೂಟ್ ಉಡುಗೊರೆಕೊಟ್ಟಿದ್ದಾರೆ. ಆ ಉದ್ಯಮಿಗೂ ನರೇಂದ್ರ ಮೋದಿಯವರಿಗೂ ಏನು ಸಂಬಂಧ ಅಂತ ಮೋದಿ ಉತ್ತರಿಸಬೇಕು ಎಂದು ಪ್ರಶ್ನೆ ಮಾಡಿದರು.

ಇನ್ನೂ ಮುಂದುವರೆದು ಮಾತನಾಡಿದ ಅವರು, ಮೋದಿ ಆ ಸೂಟ್ ನ್ನು 4.31 ಕೋಟಿ ರೂ ಗೆ ಹರಾಜು ಹಾಕಿದ್ದಾರೆ. ಮೇಲಾಗಿ ಆದಾಯ ತೆರಿಗೆ ಕಾಯ್ದೆ ಪ್ರಕಾರ 25 ಲಕ್ಷಕ್ಕಿಂತ ಹೆಚ್ಚು ಮೌಲ್ಯದ ಉಡುಗೊರೆ ಪಡೆದ್ರೆ ಅದನ್ನು ತಮ್ಮ ಆದಾಯ ಎಂದು ಪರಿಗಣಿಸಿ ಘೋಷಿಸಿಕೊಳ್ಳಬೇಕು. ಆದರೆ ಪ್ರಧಾನಿ ನರೇಂದ್ರ ಮೋದಿಯವರ ಪಾನ್ ಕಾರ್ಡ್ ನಂಬರ್ ಆಧಾರದ ಮೇಲೆ ಹುಡುಕಿದಾಗ, ಸೂಟ್ ನ್ನ ತಮ್ಮ ಆದಾಯ ತೆರಿಗೆಯಲ್ಲಿ ಘೋಷಿಸಿಕೊಂಡಿಲ್ಲ. ಇದು ಮಹಾಪರಾಧ. ಇದಕ್ಕೆ ಪ್ರಧಾನಿ ನರೇಂದ್ರಮೋದಿ ಉತ್ತರಿಸಬೇಕು ಅಂತ ಉಗ್ರಪ್ಪ ಆಗ್ರಹಿಸಿದ್ರು.

ಇನ್ನು ಸಿಎಂ ಹುಬ್ಲೋಡ್ ವಾಚ್ ವಿಚಾರವಾಗಿ ಸಿಎಂ ವಿರುದ್ದ ಹರಿಹಾಯ್ದಿದ್ದ ಬಿಜೆಪಿ ನಾಯಕರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಉಗ್ರಪ್ಪ ಮುಖ್ಯಮಂತ್ರಿ ಸಿದ್ದರಾಮಯ್ಯ ತಮಗೆ ಉಡುಗೊರೆ ಬಂದ ಹ್ಯುಬ್ಲೋ ವಾಚ್‌ನ್ನು ರಾಜ್ಯದ ಆಸ್ತಿ ಎಂದು ಘೋಷಣೆ ಮಾಡಿದ್ದಾರೆ. ಹೀಗಾಗಿ ಅದನ್ನು ಆದಾಯ ತೆರಿಗೆ ಆಸ್ತಿ ಘೋಷಣೆಯಲ್ಲಿ ನಮೂದಿಸುವ ಅಗತ್ಯವಿಲ್ಲ ಅಂತ ಸಮರ್ಥನೆ ಮಾಡಿಕೊಂಡ್ರು.

Next Story

RELATED STORIES