Top

ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಭರ್ಜರಿ ಕ್ಯಾಂಪೇನ್

ಮೈಸೂರು : ಇವತ್ತು ಸಿಎಂ ಸಿದ್ದರಾಮಯ್ಯ ಭರ್ಜರಿ ಕ್ಯಾಂಪೇನ್ ನಡೆಸಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ 20 ಹಳ್ಳಿಯಲ್ಲಿ ಪ್ರಚಾರ ನಡೆಸಿದ ಸಿಎಂಗೆ ಹೋದಲೆಲ್ಲ ಭರ್ಜರಿಯಾಗಿ ಸ್ವಾಗತ ಸಿಕ್ಕಿತ್ತು. ಇದಕ್ಕೂ ಮುನ್ನ ಮೈಸೂರಿನ ತಮ್ಮ ನಿವಾಸದ ಬಳಿ ಮಾತನಾಡಿದ ಸಿಎಂ, ಬಿಜೆಪಿಯವ್ರು ತಾವೇ ಸ್ವತಹ ಕೇಳಿಕೊಂಡು ಐಟಿ ದಾಳಿ ಮಾಡಿಸಿಕೊಂಡಿದ್ದಾರೆಂದು ಬಿಜೆಪಿಯ ಮುಖಂಡರ ದಾಳಿಗೆ ಎದುರೇಟು ಕೊಟ್ರು. ಇದೇವೇಳೆ ನಟ ಸುದೀಪ್‌ ಕೆಲಸದ ಹಿನ್ನಲೆಯಲ್ಲಿ ಪ್ರಚಾರಕ್ಕೆ ಬಂದಿಲ್ಲ ಎಂದು ಸ್ಪಷ್ಟನೆ ಕೊಟ್ರು..

ಇದಾದ ಬಳಿಕ ಚಾಮರಾಜ ಕ್ಷೇತ್ರದ ಬಹಿರಂಗ ಸಭೆಯಲ್ಲಿ ಭಾಗಿಯಾದ ಸಿಎಂ, ಕೇಂದ್ರ ಸಚಿವರು ಹಾಗೂ ಪ್ರಧಾನಿ‌ ಮೋದಿ ವಿರುದ್ಧ 56 ಇಂಚಿನ ಎದೆಯ ವಿಷಯ ಪ್ರಸ್ತಾಪ ಮಾಡಿದ್ರು. ಬಾಡಿ ಬಿಲ್ಡರ್‌ಗಳಿಗೂ 56 ಇಂಚಿನ ಎದೆ ಇರುತ್ತೆ. ಮೋದಿಗೆ ಹೃದಯವೇ ಇಲ್ಲ ಎನ್ನುವ ಮೂಲಕ ಟಾಂಗ್ ನೀಡಿದ್ರು. ಜೊತೆಯಲ್ಲಿ ವಾಸು ಕೂಡ ಸಿಎಂರನ್ನ ಅಭಿವೃದ್ಧಿಯ ಹರಿಕಾರ ಎಂದು ಬಣ್ಣಿಸಿದರು. ನನ್ನ ಮತ್ತು ಸಿಎಂ ಮಧ್ಯೆ ಯಾವುದೇ ಗೊಂದಲವಿಲ್ಲ. ಇದನ್ನ ಕೆಲವರು ಕುಚೋದ್ಯ ಮಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಮಧ್ಯೆ ನಾಗನಹಳ್ಳಿಯಲ್ಲಿ ನಟ ದರ್ಶನ್ ಬಂದು ಹೋದ ನಂತರ ನಡೆದ ಗಲಾಟೆ ಹಿನ್ನಲೆಯಲ್ಲಿ ಇವತ್ತು ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪಾದಯಾತ್ರೆ ನಡೆಸಿದ್ರು. ಅಲ್ಲದೆ, ನಾಗನಹಳ್ಳಿಯಲ್ಲಿ ಎಲ್ಲವು ಸರಿ ಇದೆ. ಹಾಗಾಗಿ ಸಣ್ಣಪುಟ್ಟ ಗಲಾಟೆ ನಾವು ಸರಿಪಡಿಸಿಕೊಳ್ಳುತ್ತೇವೆ ಎಂದು ಕಾಂಗ್ರೆಸ್ ಮುಖಂಡ ಮದನ್ ಪಟೇಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ, ಚಾಮುಂಡೇಶ್ವರಿ ಗೆಲ್ಲೋಕ್ಕೆ ಇವತ್ತು ಸಿಎಂ ಕೊನೆ ದಿನದ ಪ್ರಚಾರ ನಡೆಸಿದ್ದಾರೆ. ಆದ್ರೆ, ಮೇ 12 ಸಿಎಂ ನಡೆಸಿದ ಪ್ರಚಾರ, ವಾಗ್ಭಾಣಗಳು ಎಷ್ಟರಮಟ್ಟಿಗೆ ವರ್ಕೌಟ್ ಆಗಲಿದೆ ಎಂಬುದನ್ನ ಕಾದು ನೋಡಬೇಕಿದೆ.

Next Story

RELATED STORIES