Top

ಫಸ್ಟ್ ಟೈಮ್ ಓಟ್ ಮಾಡಿದವ್ರಿಗೆ ಸಿಗುತ್ತೆ ಇಲ್ಲಿ ಮಸಾಲ್ ದೋಸೆ ಫ್ರೀ

ಬೆಂಗಳೂರು : ಬಿಸಿ ಬಿಸಿ ಮಸಾಲ್​ ದೋಸೆ.. ಅದ್ರ ಜೊತೆಗೆ ಫಿಲ್ಟರ್​ ಕಾಫಿ.. ವಾವ್​ ಕೇಳ್ತಿದ್ರೆ ತಿನ್​ ಬೇಕು ಅನ್ಸುತ್ತೆ ಅಲ್ವಾ.. ಇನ್ನೂ ದುಡ್ಡು ಕೊಟ್ಟು ತಿನ್ಬೇಕು ಅಂದ್ರು ಮಿನಿಮಮ್​ 50 ರೂಪಿಸ್​ ಬೇಕು.. ಫ್ರೀಯಾಗಿ ಸಿಗುತ್ತೆ ಅಂದ್ರೆ ಕೇಳ್ಬೇಕಾ.. ಜನ್ರು ಕ್ಯೂ ಹಚ್ಚಿ ನಿಲ್ಲೋಂದು ಗ್ಯಾರಂಟಿ.. ಆದ್ರೆ ನೀವ್​ ದೋಸೆ ಹಾಗೂ ಕಾಫಿ ನಾ ಫ್ರೀಯಾಗಿ ಪಡಿಬೇಕು ಅಂದ್ರೆ ಒಂದ್​ ಕೆಲ್ಲಾ ಮಾಡ್ಬೇಕು.. ಜಸ್ಟ್​ ಸಿಂಪಲ್​ ವೋಟ್​ ಮಾಡಿದ್ರೆ ಸಾಕು..

ಹೌದು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸಲು ಈಗಾಗ್ಲೇ ಚುನಾವಣಾ ಆಯೋಗ ಹಾಗೂ ಬಿಬಿಎಂಪಿ ಸಾಕಷ್ಟು ಅಭಿಯಾನ, ಜಾಗೃತಿ ಕಾರ್ಯಕ್ರಮ ಮಾಡ್ತಿದೆ.. ಅದ್ರ ಜೊತೆಗೆ ನಗರದ ನೃಪತುಂಗ ರಸ್ತೆಯಲ್ಲಿರೋ ಸಿಸರ್ಗ ಗ್ರಾಂಡ್​ ಹೋಟೇಲ್​ ಕೂಡ ಸ್ಪೇಷಲ್​ ಆಫರ್​ ನೀಡಿದೆ.. ಆಫರ್​ ಎನಪ್ಪಾ ಅಂದ್ರೆ ಎಲೆಕ್ಷನ್​ ದಿನಾ ಫಸ್ಟ್​ ಟೈಮ್​ ಓಟು ಮಾಡಿದೋರು ಇಲ್ಲಿ ಫ್ರಿಯಾಗಿ ಮಸಾಲದೋಸೆ ಹಾಗೂ ಬಿಸಿಬಿಸಿ ಫಿಲ್ಟರ್​ ಕಾಫಿ ಸವಿಬಹುದು.. ಜೊತೆಗೆ ಓಟ್​ ಮಾಡಿದ ಎಲ್ಲಾ ಮತದಾರರು ಫ್ರೀಯಾಗಿ ಕಾಫಿ ಸವಿಬಹುದಾಗಿದೆ..

ಇನ್ನೂ ಹೊಟೇಲ್​ ಮಾಲೀಕರನ್ನಾ ಇದ್ರ ಬಗ್ಗೆ ವಿಚಾರಿಸಿದ್ರೆ ಇಲ್ಲಿ ಬರೋ ಯೂಥ್ಸ್​ ಮತದಾನದಿಂದ ದೂರ ಉಳಿಯೋ ಮಾತಾಡ್ತಿದ್ರು. ಈ ಹಿನ್ನಲೆ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗ್ಲಿ ಅನ್ನೋ ಉದ್ದೇಶದಿಂದ ಈ ಐಡಿಯಾ ಮಾಡಿದ್ವಿ. ಅದ್ರ ಜೊತೆ ಅದ್​ ಕೊಡ್ತಿವಿ ಇದ್​ ಕೊಡ್ತಿವಿ ಓಟ್​ ಹಾಕಿ ಅಂತಾ ಸುಳ್ಳು ಆಶ್ವಾಸನೆ ಕೊಡೋರ್ರ ಮಧ್ಯ ಇವ್ರು ಡಿಫರೆಂಟ್.​

ದೋಸೆ ಆಸೆಗಾದರೂ ಓಟ್​ ಮಾಡ್ಲಿ ಅನ್ನೋದು ಮಾಲೀಕರ ಆಸೆ. ಹಾಗಾದ್ರೆ ಮತ್ತೆ ಯಾಕೆ ತಡ ಫಸ್ಟ್​ ಟೈಮ್​ ವೋಟ್​ ಮಾಡಿದೋರು, ನೃಪತುಂಗ ರಸ್ತೆಯಲ್ಲಿರುವ ನಿಸರ್ಗ ಗ್ರಾಂಡ್ ಹೊಟೇಲ್‌ಗೆ ತೆರಳಿ, ಕಾಫಿ ಜೊತೆ ದೋಸೆ ತಿನ್ನಿ. ಜೊತೆಗೆ ವೋಟ್​ ಮಾಡಿದೋರು ಕಾಫಿ ಕೂಡಿದು ಹರಟೆ ಹೊಡಿರಿ. ಅದೇನೆ ಇರಲಿ, ಮತದಾನ ಪ್ರಜಾಫ್ರಭುತ್ವದ ಅಳಿವು ಉಳಿವಿನ ಪ್ರಶ್ನೆ. ಇಂತಹ ಮತದಾನಕ್ಕೆ ಪ್ರೇರೇಪಣೆ ಮಾಡುತ್ತಿರುವ, ನಿಸರ್ಗ ಹೋಟೆಲ್ ಮಾಲೀಕರಿಗೆ ನಮ್ಮದೊಂದು ಸೆಲ್ಯೂಟ್.

Next Story

RELATED STORIES