Top

ದೆಹಲಿಯ ಕಡೆ ಮುಖಮಾಡಿದ ಯುವರಾಜ

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪಕ್ಷದ ಅಭ್ಯರ್ಥಿಗಳ ಪರ ಇಂದು ಅಂತಿಮ ಪ್ರಚಾರ ನಡೆಸಿದ್ರು. ಬೆಂಗಳೂರಿನಲ್ಲಿಂದು ಹಲವು ಕಡೆ ರಾಹುಲ್ ರೋಡ್ ಶೋ ನಡೆಸಿದ್ರು..ಬೆಳಗ್ಗೆ ಬಸವನಗುಡಿಯ ದೊಡ್ಡಬಸವಣ್ಣ ದೇಗುಲಕ್ಕೆ ಭೇಟಿ ನೀಡಿದ್ರು. ದೇವರಿಗೆ ವಿಶೇಷ ಪ್ರಾರ್ಥನೆಯನ್ನ ಸಲ್ಲಿಸಿದ್ರು. ಈ ವೇಳೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಹಾಗೂ ಎಐಸಿಸಿ ಪ್ರಧಾನಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಸಾಥ್ ನೀಡಿದ್ರು.

ಇನ್ನು ದೇವರ ದರ್ಶನದ ಬಳಿಕ ರಾಹುಲ್ ಗಾಂಧಿ ಹೊಸೂರು ರಸ್ತೆಯ ಗಾರ್ಮೆಂಟ್ಸ್ ಫ್ಯಾಕ್ಟರಿಗೆ ಭೇಟಿ ಕೊಟ್ರು. ಬಳಿಕ ಮಹಿಳಾ ಕಾರ್ಮಿಕರ ಜೊತೆ ಸಂವಾದ ನಡೆಸಿದ್ರು. ಈ ವೇಳೆ ನಮಗೆ ಬರೋದು ಏಳೆಂಟು ಸಾವಿರ ಸಂಬಳ, ಅದರಲ್ಲಿ 2 ಸಾವಿರ ಬಸ್ ಚಾರ್ಜ್ ಗೇ ನೀಡಬೇಕು. ಹೀಗಾಗಿ ನಮಗೆ ಉಳಿಯೋದು ಏನಿದೆ? ಯಾವ ಸರ್ಕಾರಗಳು ನಮ್ಮ ಸಮಸ್ಯೆ ಪತಿಹರಿಸಿವೆ ಅಂತ ನೋವು ತೋಡಿಕೊಂಡ್ರು. ನಮ್ಮಸರ್ಕಾರ ಅಧಿಕಾರಕ್ಕೆ ಬಂದರೆ, ನಿಮ್ಮ ಸಮಸ್ಯೆ ಪರಿಹರಿಸುವುದಾಗಿ ರಾಹುಲ್ ಭರವಸೆ ನೀಡಿದ್ರು. ಇದೇ ವೇಳೆ ಗೃಹ ಸಚಿವ ರಾಮಲಿಂಗಾರೆಡ್ಡಿ ತಮ್ಮ ಪುತ್ರಿ ಸೌಮ್ಯ ರಾಮಲಿಂಗಾರೆಡ್ಡಿಯನ್ನ ರಾಹುಲ್ ಗೆ ಪರಿಚಯಿಸಿದ್ರು.

ನಂತರ ರಾಹುಲ್ ಹಲವು ಪ್ರಮುಖ ರಸ್ತೆಗಳಲ್ಲಿ ರೋಡ್ ಶೋ ನಡೆಸಿದ್ರು. ಚಿಕ್ಕಪೇಟೆಯಲ್ಲಿ ಜನ ರಾಹುಲ್ ಗೆ ಹೂವಿನಸುರಿಮಳೆಯನ್ನ ಸುರಿಸಿದ್ರು. ಕಾಟನ್ ಪೇಟೆಯಲ್ಲಿರುವ ಹಜರತ್ ತವಕ್ಕಲ್ ಮಸ್ತಾನ್ ದರ್ಗಾಕ್ಕೆಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ರು. ಶಿವಾಜಿನಗರದಲ್ಲಿ ಸಾರ್ವಜನಿಕರನ್ನ ಉದ್ದೇಶಿಸಿ ರಾಹುಲ್ ಭಾಷಣ ಮಾಡಿದರು. ಸಂವಿಧಾನವನ್ನ ಬದಲಾಯಿಸ್ತೇನೆ ಅಂತ ಕೇಂದ್ರ ಸಚಿವರೊಬ್ಬರು ಹೇಳಿದ್ದಾರೆ. ಅಂಬೇಡ್ಕರ್ ರಚಿಸಿದ ಸಂವಿಧಾನ ಬದಲಾಯಿಸೋಕೆ ಇವರ್ಯಾರು. ಸಂವಿಧಾನ ಬದಲಾಯಿಸುವ ಮಾತಿರಲಿ, ಅದನ್ನ ಮುಟ್ಟಲಿ ಅಂತ ಬಿಜೆಪಿ ನಾಯಕರಿಗೆ ಸವಾಲ್ ಹಾಕಿದ್ರು.

ಇನ್ನು ರಾಹುಲ್ ಗಾಂಧಿ ಲಾಲ್ ಬಾಗ್ ರಸ್ತೆಯಲ್ಲಿರುವ ಎಂಟಿಆರ್ ಗೆ ಭೇಟಿಯನ್ನ ನೀಡಿದ್ರು..ಅಲ್ಲಿ ಸ್ವಾದಿಷ್ಟ ಭೋಜನವನ್ನೂ ಸವಿದ್ರು..ಪೂರಿ,ಮಸಾಲೆ ದೋಸೆ,ಹೆಸರು ಬೇಳೆ,ಮೊಸರನ್ನ,ಬಿಸಿಬೇಳೆ ಬಾತ್ ಹಾಗೂ ವಾಂಗೀಬಾತ್ ಅನ್ನ ಸವಿದ್ರು..ಅದ್ರಲ್ಲೂ ಹೆಸರುಬೇಳೆ ತುಂಬಾ ಚೆನ್ನಾಗಿದೆ ಅಂತ ಎರಡೆರಡು ಭಾರಿ ಹಾಕಿಸಿಕೊಂಡು ರುಚಿಯನ್ನ ಸವಿದ್ರು..ಇದೇ ವೇಳೆ ಲಾಲ್ ಬಾಗ್ ರಸ್ತೆಯಲ್ಲಿ ಮೈಲುದ್ದ ಟ್ರಾಫಿಕ್ ಜಾಮ್ ಕೂಡ ಆಯ್ತು..ಒಂದು ಕಡೆ ರಾಹುಲ್ ಮೃಷ್ಟಾನ್ನ ಭೋಜನ ಸವಿಯುತ್ತಿದ್ರೆ,ಮತ್ತೊಂದು ಕಡೆ ವಾಹನಸವಾರರು ಟ್ರಾಫಿಕ್ ಜಾಮ್ ಗೆ ಸಿಲುಕಿ ರಾಹುಲ್ ಗೆ ಹಿಡಿಶಾಪವನ್ನಹಾಕಿದ್ರು.

ನ್ಯೂ ತಿಪ್ಪಸಂದ್ರದಲ್ಲಿ ರಾಹುಲ್ ಸಾರ್ವಜನಿಕ ಸಭೆಯನ್ನೂ ನಡೆಸಿದ್ರು..ಬಿಜೆಪಿ ನಾಯಕರ ವಿರುದ್ಧ ಸಾಕಷ್ಟು ಆಕ್ರೋಶವನ್ನ ವ್ಯಕ್ತಪಡಿಸಿದ್ರು..ನ್ಯೂ ತಿಪ್ಪಸಂದ್ರದಲ್ಲಿ ಆಂಜನೇಯ ದೇಗುಲಕ್ಕೂ ಭೇಟಿಯನ್ನ ಕೊಟ್ರು..ಈ ವೇಳೆ ಮೇಯರ್ ಹಾಗೂ ಸಿವಿ ರಾಮನ್ ನಗರ ಕಾಂಗ್ರೆಸ್ ಅಭ್ಯರ್ಥಿ ಸಂಪತ್ ರಾಜ್ ಸಾಥ್ ನೀಡಿದ್ರು. ಕೊನೆಯದಾಗಿ ರಾಹುಲ್ ಹೆಬ್ಬಾಳ ಕ್ಷೇತ್ರದಲ್ಲಿ ತಮ್ಮ ಕೊನೆಯ ಪ್ರಚಾರವನ್ನ ನಡೆಸಿದ್ರು..ಅಭ್ಯರ್ಥಿ ಭೈರತಿ ಸುರೇಶ್ ಪರ ಬ್ಯಾಟಿಂಗ್ ನಡೆಸಿದ್ರು.

ಒಟ್ನಲ್ಲಿ ಇಂದು ರಾಹುಲ್ ರಾಜ್ಯ ಪ್ರವಾಸ ಮುಕ್ತಾಯಗೊಂಡಿದ್ದು, ಅಭೂತ ಪೂರ್ವ ಪ್ರತಿಕ್ರಿಯೆ ಸಿಕ್ಕಂತಾಗಿದೆ..ಮೇ ೧೨ ರಂದು ಮತದಾನ ನಡೆಯಲಿದ್ದು,೧೫ ರಂದು ಫಲಿತಾಂಶ ಹೊರಬೀಳಲಿದೆ..ಆಗ ರಾಹುಲ್ ಪ್ರಚಾರದ ಮಹತ್ವ ಬಹಿರಂಗವಾಗಲಿದೆ..

Next Story

RELATED STORIES