Top

ನಟ ಕಿಚ್ಚ ಸುದೀಪ್​ಗೆ ಸಾಕಾಯ್ತಾ ರಾಜಕೀಯ ಸಹವಾಸ..?

ಚುನಾವಣೆ ಹತ್ತಿರವಾಗ್ತಿದಂತೆ ಸ್ಯಾಂಡಲ್​ವುಡ್​ ಸ್ಟಾರ್ಸ್​ ವಿವಿಧ ಪಕ್ಷಗಳ ಪರ ಪ್ರಚಾರ ನಡೆಸುತ್ತಿದ್ದಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್. ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್ ಕೆಲ ಅಭ್ಯರ್ಥಿಗಳ ಪರ ಮತಬೇಟೆ ನಡೆಸ್ತಿದ್ಧಾರೆ. ಇದರ ನಡುವೆ ನಟ ಸುದೀಪ್ ಟ್ವೀಟ್ ಮಾಡಿ ಇನ್ನು ಮುಂದೆ ಪ್ರಚಾರ ನಡೆಸೋದಿಲ್ಲ ಅಂತ ಹೇಳಿದ್ದಾರೆ. ಅಭಿಮಾನಿಗಳು ಮತ್ತು ಸ್ನೇಹಿತರ ಸಲುವಾಗಿ ಇಂಥದೊಂದು ಕಠಿಣ ನಿರ್ಧಾರ ತೆಗೆದುಕೊಂಡಿರೋದಾಗಿ ಅವರು ತಿಳಿಸಿದ್ದಾರೆ.

ತಮ್ಮ ನೆಚ್ಚಿನ ನಟರು ಆ ಪಕ್ಷದ ಪರ, ಈ ಅಭ್ಯರ್ಥಿಯ ಪರ ಮತ ಕೇಳೋದು ತಪ್ಪು, ರಾಜಕೀಯದಿಂದ ದೂರ ಉಳಿಯಬೇಕು ಅಂತ ಕೆಲ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇನ್ನೂ ಸುದೀಪ್ ಮುಖ್ಯಮಂತ್ರಿ ಸಿದ್ಧರಾಮಯ್ಯ ಪರ ಪ್ರಚಾರ ನಡೆಸ್ತಾರೆ ಅನ್ನೋ ವಿಚಾರವೂ ಗೊಂದಲಕ್ಕೆ ಕಾರಣವಾಗಿತ್ತು. ಇದೆಲ್ಲದರ ಪರಿಣಾಮವಾಗಿಯೇ ಸುದೀಪ್ ಇಂಥದೊಂದು ನಿರ್ಧಾರಕ್ಕೆ ಬಂದಿದ್ದಾರೆ ಅನ್ನಲಾಗ್ತಿದೆ.

Next Story

RELATED STORIES