Top

ಧೋನಿ ಮೊದಲ ಕ್ರಶ್ ಯಾರು ಗೊತ್ತಾ?

ಪುಣೆ: ಈ ವಿಷಯ ಪತ್ನಿ ಸಾಕ್ಷಿಗೆ ತಿಳಿಸಬೇಡಿ ಎಂದು ಮನವಿ ಮಾಡಿದ ನಂತರ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ತಮ್ಮ ಮೊದಲ ಕ್ರಶ್ ಹೆಸರು ಬಹಿರಂಗಪಡಿಸಿದ್ದಾರೆ.

ಪುಣೆಯಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಧೋನಿಗೆ ನಿರೂಪಕರು ನಿಮ್ಮ ಮೊದಲ ಕ್ರಶ್ ಯಾರು ಎಂದು ಕೇಳಿದಾಗ ನನ್ನ ಜೀವನದಲ್ಲಿ ಮೊದಲು ಇಷ್ಟ ಪಟ್ಟ ಹುಡುಗಿಯ ಹೆಸರಿನಲ್ಲಿ ಎ ಅಕ್ಷರ ಇದೆ. ಅದರು ಹೆಸರಿನ ಮೂರನೇ ಅಕ್ಷರ ಎಂದು ಹೇಳಿದರು.

ಸಾಧಾರಣವಾಗಿ ತಮ್ಮ ಖಾಸಗಿ ಜೀವನದ ವಿಚಾರನ್ನು ಸಾರ್ವಜನಿಕವಾಗಿ ಮಾತನಾಡದ ಧೋನಿ, ನಾನು 1990 ರಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವೇಳೆ ಸ್ವಾತಿ ಮೇಲೆ ನನಗೆ ಮನಸ್ಸಾಗಿತ್ತು ಎಂದು ತಿಳಿಸಿದ್ದಾರೆ.

ಈ ವೇಳೆ ನಿರೂಪಕ ಮತ್ತೊಂದು ಶಾಕ್ ನೀಡಿ ಸ್ವಾತಿ ಸದ್ಯ ಈ ಕಾರ್ಯಕ್ರಮದಲ್ಲೇ ಇದ್ದಾರೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಅಲ್ಲದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯುವತಿಯನ್ನು ವೇದಿಕೆ ಗೆ ಪ್ರವೇಶ ಮಾಡುವಂತೆ ತಿಳಿಸಿದ್ದರು. ಆದರೆ ಬಳಿಕ ಸ್ವಾತಿ ಇಲ್ಲಿ ಇಲ್ಲ ಎಂದು ಹೇಳಿ ಪ್ರಾಂಕ್ ಮಾಡಿದ್ದಾಗಿ ತಿಳಿಸಿದರು.

ಧೋನಿ ತಮ್ಮ ಪಿಯುಸಿ ವ್ಯಾಸಂಗವನ್ನು ರಾಂಚಿಯ ದೇವ್ ಜೆವಿಎಂ ಕಾಲೇಜಿನಲ್ಲಿ ಓದಿದ್ದರು.

Next Story

RELATED STORIES